ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ನಮಗೆ ಪ್ರಮುಖ ಎದುರಾಳಿ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಿದ್ದರಾದರೂ, ವಾಸ್ತವವಾಗಿ ಅವರು ಮಾಡಿದ್ದು ಜೆಡಿಎಸ್ ಮುಗಿಸುವ ಸಂಚು ಎಂದು ಜೆಡಿಎಸ್ ಶಾಸಕಾಂಗ ಸಭೆ ಅಭಿಪ್ರಾಯ ಪಟ್ಟಿದೆ.
ಜೆಡಿಎಸ್ ಶಾಸಕಾಂಗದ ಸಭೆಯಲ್ಲಿ ಸೋಲಿನ ಕಾರಣಗಳ ಕುರಿತು ಪರಾಮರ್ಶೆ ನಡೆಸಲಾಯಿತು. ರಾಜ್ಯದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಪಕ್ಷ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಚರ್ಚೆ ನಡೆಸಲಾಗಿದೆ.
ಅದಕ್ಕಿಂತಲೂ ಮುಖ್ಯವಾಗಿ ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ. ರಾಜ್ಯದಲ್ಲಿ ಇನ್ನು ಏನಿದ್ದರೂ ರಾಷ್ಟ್ರೀಯ ಪಕ್ಷಗಳ ಕಾಲ ಎಂಬ ಮಾತನ್ನು ಸುಳ್ಳಾಗಿಸಬೇಕು. ಹಿಂದೆ ಸಾಕಷ್ಟು ಹಿನ್ನೆಡೆಯನ್ನು ಅನುಭವಿಸಿದಾಗಲೂ ಅಧಿಕಾರ ಹಿಡಿದಿರುವ ಉದಾಹರಣೆಗಳಿವೆ ಎಂಬ ಬಗ್ಗೆ ಚರ್ಚೆ ನಡೆಯಿತು. ಶಾಸಕಾಂಗ ಪಕ್ಷದ ನಾಯಕನಾಗಿ ಎಚ್.ಡಿ. ಕುಮಾರಸ್ವಾಮಿ ಎಂದು ಖಚಿತವಾಗಿದ್ದರೂ, ಇದನ್ನು ಅಧಿಕೃತವಾಗಿ ಜೂನ್ 14 ಮತ್ತು 15ರಂದು ನಡೆಯುವ ಸಭೆಯಲ್ಲಿ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಹಾಜರಿದ್ದ ನೂತನ ಶಾಸಕರು ಜೆಡಿಎಸ್ ಸೋಲಿಗೆ ಅಧಿಕಾರ ಹಸ್ತಾಂತರದ ಪ್ರಭಾವವೂ ಕಾರಣ ಎಂದು ದೇವೇಗೌಡರನ್ನು ದೂರಿದರು.
|