ರಾಜ್ಯಕ್ಕೆ ಮುಂಗಾರು ಮಳೆರಾಯ ಕಾಲಿಟ್ಟಿದ್ದು, ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ತಂಪೆರಚಿತು. ಆದರೆ ಇದೇ ಸಂದರ್ಭ ಕೆಲವೆಡೆ ಸಂಚಾರವೂ ಅಸ್ತವ್ಯಸ್ತಗೊಂಡಿತು.
ಇದರಿಂದಾ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಛತ್ರಿ ಇಲ್ಲದೆ, ಮಳೆಯಲ್ಲಿ ನನೆಯುತ್ತಾ ಮನೆಗೆ ಸೇರುತ್ತಿದ್ದವರ ದೃಶ್ಯ ಸಾಮಾನ್ಯವಾಗಿತ್ತು.
ಗುಡುಗು, ಸಿಡಿಲಿನಿಂದ ಕೂಡಿದ ಮಳೆಯ ಅರ್ಭಟಕ್ಕೆ ಅಲ್ಲಲ್ಲಿ ಮರಗಳು ಉಳಿದಿರುವ ವರದಿ ಬಂದಿದೆ. ಅಲ್ಲದೆ, ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯವೂ ಸ್ವಲ್ಪ ವಿಳಂಬವಾಗಿತ್ತು.
ಈ ಮಧ್ಯೆ, ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಹಾಸನದಲ್ಲಿ ಅಪಾರ ಬೆಳೆಯೂ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
|