ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಬೆಳಗಾವಿಯ ಅಜಮ್ ನಗರ ನಿವಾಸಿ ನಾಸೀರ್ ಲಿಯಾಖತ್ ಪಟೇಲ್ (21) ಎಂಬ ಸಂಶಯಿತ ಉಗ್ರನನ್ನು ನಗರದ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಂಶಯಿತ ಉಗ್ರನಿಂದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಒಂದನ್ನು ವಶಪಡಿಸಿಕೊಳ್ಳಲಾಗಿದ್ದು, ಹಾರ್ಡ್ ಡಿಸ್ಕ್‌ನಲ್ಲಿ ಸುಧಾರಿತ ರೀತಿಯಲ್ಲಿ ಬಾಂಬ್ ತಯಾರಿಕೆ ಸ್ಫೋಟಿಸುವ ಮಾಹಿತಿಯನ್ನು ಶೇಖರಿಸಿಡಲಾಗಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. 21 ವರ್ಷದ ನಾಸೀರ್ ಲಿಯಾಖತ್ ಪಟೇಲ್ ನಿಷೇಧಿತ ಸಿಮಿ ಸದಸ್ಯ ಡಾ. ಮನ್ ರಾಜ್ ಜೊತೆ ನಿಕಟ ಸಂಪರ್ಕದಲ್ಲಿದ್ದನು ಎನ್ನುವ ಆಘಾತಕಾರಿ ಅಂಶವು ತನಿಖೆಯಲ್ಲಿ ಹೊರಬಿದ್ದಿದೆ.
ಈ ಕುರಿತು ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|