ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತನಿಗೆ ಗೂಸಾ  Search similar articles
ಕೆಪಿಸಿಸಿ ಕಚೇರಿ ಒಳಗಡೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಭರಾಟೆಯಾದರೆ ಹೊರಗಡೆ ಪಕ್ಷದ ಎರಡು ಗುಂಪಿನ ಕಾರ್ಯಕರ್ತರ ನಡುವೆ ಹೊಡೆದಾಟ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಆದರೆ ಇದರಿಂದ ಬೇಸತ್ತ ಸಿದ್ಧರಾಮಯ್ಯನವರು ಬೆಂಬಲಿಗರು ಹೊರಗಡೆ ಪಟಾಕಿ ಸಿಡಿಸಿದ ಕಾರ್ಯಕರ್ತನೊಬ್ಬನಿಗೆ ಥಳಿಸಿದ ಪರಿಣಾಮವಾಗಿ, ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮುಗಿದ ನಂತರ ಮಲ್ಲಿಕಾರ್ಜುನ ಖರ್ಗೆ ಕಡೆಯ ಕಾರ್ಯಕರ್ತರು ಹೊರಗಡೆ ಪಟಾಕಿ ಸಿಡಿಸಿದರು. ಆದರೆ ಸಿಎಲ್‌ಪಿ ನಾಯಕರಾಗಿ ಸಿದ್ಧರಾಮಯ್ಯ ಆಯ್ಕೆಯಾಗದ ಬಗ್ಗೆ ಮೊದಲೇ ಆಕ್ರೋಶಗೊಂಡಿದ್ದ ಅವರ ಬೆಂಬಲಿಗರಿಗೆ ಇದು ಬೆಂಕಿಗೆ ತುಪ್ಪ ಸುರಿದಂತಾಯಿತು.

ಆಕ್ರೌೋಶಗೊಂಡ ಕಾರ್ಯಕರ್ತರು ಖರ್ಗೆ ಬೆಂಬಲಿಗ ಶಂಕರ್ ಎಂಬುವವರನ್ನು ಅಟ್ಟಾಡಿಸಿ ಥಳಿಸಿದರು. ಶಾಸಕ ಹ್ಯಾರಿಸ್ ಹಾಗೂ ಪೊಲೀಸರ ಮಧ್ಯ ಪ್ರವೇಶದಿಂದ ಉದ್ವಿಗ್ನ ಪರಿಸ್ಥಿತಿ ತಿಳಿಯಾಯಿತು. ಹೀಗೆ ಕಚೇರಿಯಲ್ಲಿ, ಮನದೊಳಗೆ ಅನೇಕ ಶಾಕರು ಅಸಮಾಧಾನ ತಳೆದರೆ ಹೊರಗಡೆ ಕಾರ್ಯಕರ್ತರು ನೇರವಾಗಿ ತಮ್ಮ ಅಸಮಾಧಾನವನ್ನು ಈ ರೀತಿ ವ್ಯಕ್ತಪಡಿಸಿದರು.
ಮತ್ತಷ್ಟು
ಬೆಳಗಾವಿ: ಉಗ್ರನ ಬಂಧನ
ಬಿಎಂಐಸಿಗೆ ಭೂಮಿ ನೀಡಿದರೆ ಹೋರಾಟ: ಕುಮಾರ
ರಾಜ್ಯಕ್ಕೆ ಕಾಲಿಟ್ಟ ಮುಂಗಾರು ಮಳೆ
ವಿಪಕ್ಷ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆ
ಕಳ್ಳಭಟ್ಟಿ : ನಾಲ್ವರು ಆರೋಪಿಗಳ ಬಂಧನ
ದೇವೇಗೌಡರನ್ನು ದೂರಿದ ಜೆಡಿಎಸ್ ಶಾಸಕರು