ನೂತನ ಅಂತಾರಾಷ್ಟ್ತ್ರೀಯ ವಿಮಾನ ನಿಲ್ದಾಣಕ್ಕೆ ಯಾವ ಹೆಸರಿಡಬೇಕೆಂಬ ಬಗ್ಗೆ ಗೊಂದಲ ಸೃಷ್ಟಿಯಾಗುತ್ತಲೇ ಇದೆ. ಆದರೆ ವಿಮಾನ ನಿಲ್ದಾಣಕ್ಕೆ ಯಾವುದೇ ಒಬ್ಬ ವ್ಯಕ್ತಿಯ ಅಥವಾ ಜಾತಿಯ ಮುಖಂಡರ ಹೆಸರಿಡಬಾರದೆಂದು ದಲಿತ ಸಂಘರ್ಷ ಸಮಿತಿ ಅಗ್ರಹಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕ ಸಿದ್ಧಲಿಂಗಯ್ಯ, ವಿಮಾನ ನಿಲ್ದಾಣಕ್ಕೆ ದೇವನಹಳ್ಳಿ ಅಂತಾರಾಷ್ಟ್ತ್ರೀಯ ವಿಮಾನ ನಿಲ್ದಾಣ ಅಥವಾ ಬೆಂಗಳೂರು ಅಂತಾರಾಷ್ಟ್ತ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿಡಬೇಕೆಂದರು.
ಈ ಕುರಿತು ನಡೆದ ಪ್ರತಿಭಟನೆಯಿಂದ ಅನೇಕ ಕಡೆ ಗಲಭೆ ಸೃಷ್ಟಿಯಾಗಿ ಜನರ ನೆಮ್ಮದಿ ಹಾಳಾಗಿದೆ. ಯಾವುದೇ ಒಬ್ಬ ವ್ಯಕ್ತಿಯ ಹೆಸರಿಡಬೇಕೆಂದು ಒತ್ತಾಯಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದರು. ದೇವನಹಳ್ಳಿಯ ಜನತೆ ಈ ನಿಲ್ದಾಣಕ್ಕಾಗಿ ತಮ್ಮ ಜೀವವನ್ನೇ ಒತ್ತೆಯಿಟ್ಟು ಭೂಮಿ ನೀಡಿದ್ದಾರೆ. ಆದ್ದರಿಂದ ದೇವನಹಳ್ಳಿ ಎಂಬ ಹೆಸರೇ ಸೂಕ್ತ ಎಂದು ಒತ್ತಾಯಿಸಿದರು.
|