ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುಳ್ಳು ಪ್ರಮಾಣ ಪತ್ರ: ಲಾಡ್ ವಿರುದ್ಧ ದೋಷಾರೋಪ  Search similar articles
ಸುಳ್ಳು ಆಸ್ತಿ ವಿವರ ಸಲ್ಲಿಸಿದ ಮೂವರು ಶಾಸಕರಿಗೆ ಹಾಗೂ ಒಬ್ಬ ಮಾಜಿ ಶಾಸಕರ ವಿರುದ್ಧ ಲೋಕಾಯುಕ್ತರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಕಲಘಟಗಿ ಶಾಸಕ ಸಂತೋಷ್ ಲಾಡ್, ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್, ಬಾಗಲಕೋಟೆಯ ವೀರಣ್ಣ ಚರಂತಿಮಠ ಮತ್ತು ಮಾಜಿ ಶಾಸಕ ಉಮಾಪತಿ ವಿರುದ್ಧ ಲೋಕಾಯಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೆಂಗಳೂರಿನ ಮ್ಯಾಜಿಸ್ಟ್ತ್ರೇಟ್ ಕೋರ್ಟ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಈ ನಾಲ್ವರು 2007 ರಲ್ಲಿ ಲೋಕಾಯುಕ್ತರಿಗೆ ಸುಳ್ಳು ಆಸ್ತಿ ವಿವರ ನೀಡಿದ್ದು, ಇವರಿಗೆ ನೋಟೀಸ್ ಜಾರಿ ಮಾಡಲಾಗಿತ್ತು.ಲೋಕಾಯುಕ್ತರ ವಿಚಾರಣೆ ಸಂದರ್ಭದಲ್ಲಿ ಇವರ ಆರೋಪ ಸಾಬೀತಾಗಿದ್ದು ಈಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಒಂದು ವೇಳೆ ನ್ಯಾಯಾಲಯದಲ್ಲಿ ಆರೋಪ ಸಾಬೀತಾದರೆ ಇವರಿಗೆ ಕನಿಷ್ಠ 6 ತಿಂಗಳು ಕಠಿಣ ಸೆರೆಮನೆ ಹಾಗೂ ಭಾರಿ ಪ್ರಮಾಣದ ದಂಡದ ಪಾವತಿ ಮಾಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಬಹುದು.
ಮತ್ತಷ್ಟು
ಧಾರ್ಮಿಕ ಯಾತ್ರೆಯಲ್ಲಿ ಯಡಿಯೂರಪ್ಪ
ಅಂ. ರಾ.ವಿಗೆ ದೇವನಹಳ್ಳಿ ಹೆಸರೇ ಸೂಕ್ತ: ದಸಂಸ
ಶಾಸಕ ಚಿಕ್ಕಣ್ಣ ವಿರುದ್ಧ ಬಿಎಸ್ಪಿ ದೂರು
ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತನಿಗೆ ಗೂಸಾ
ಬೆಳಗಾವಿ: ಉಗ್ರನ ಬಂಧನ
ಬಿಎಂಐಸಿಗೆ ಭೂಮಿ ನೀಡಿದರೆ ಹೋರಾಟ: ಕುಮಾರ