ನೂತನ ಸರಕಾರಕ್ಕೆ ಬೆಂಬಲ ನೀಡಲು ಮುಂದಾಗಿರುವ ಪಕ್ಷೇತರರು ಇನ್ಯಾವುದೇ ಪ್ರಭಾವಕ್ಕೆ ಒಳಗಾಗಬಾರದು ಎಂಬ ದೃಷ್ಟಿಯಿಂದ ಅವರನ್ನು ಕರ್ನಾಟಕದಿಂದ ದೂರದ ಪ್ರದೇಶದಲ್ಲಿ ಇರಿಸಲಾಗಿದೆ. ಅವರಿಗೆ ಉತ್ತಮ ಹುದ್ದೆಗಳನ್ನು ನೀಡಲು ಮುಂದಾಗಿರುವುದರ ಜೊತೆಗೆ ಈಗ ಐಷಾರಾಮಿ ಗೃಹಬಂಧನಲ್ಲಿರಿಸಿದೆ.
ಮೂವರು ಪಕ್ಷೇತರರಿಗೆ ಬಿಜೆಪಿ ವಿಚಾರಧಾರೆಗಳ ಬಗ್ಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪಾಠ ಮಾಡುತ್ತಿದ್ದಾರೆ. ಸರಕಾರವನ್ನು ಐದು ವರ್ಷ ಯಾವುದೇ ವಿಘ್ನವಿಲ್ಲದೇ ಮುನ್ನಡೆಸಲು ಸಹಾಯವಾಗಬಹುದು ಎನ್ನುವುದು ಬಿಜೆಪಿ ನಂಬಿಕೆ. ಸರಕಾರವನ್ನು ಉರುಳಿಸಲು ಪಕ್ಷೇತರರನ್ನು ತಮ್ಮತ್ತ ಸೆಳೆಯುವ ಯತ್ನವನ್ನು ಇತರ ಪಕ್ಷಗಳು ಮುಂದುವರೆಸಿವೆ. ಇದರಿಂದ ತಪ್ಪಿಸಲು ಆರು ಮಂದಿ ಪಕ್ಷೇತರರನ್ನು ಬಿಜೆಪಿ ನಿಗೂಢ ಸ್ಥಳದಲ್ಲಿರಿಸಿದೆ.
ಮೂವರು ಪಕ್ಷೇತರರನ್ನು ಮೋದಿ ಪಾಠಕ್ಕಾಗಿ ಗುಜರಾತ್‌ಗೆ ಕಳುಹಿಸಿದ್ದು, ಇಬ್ಬರು ಶಾಸಕರ ಇನ್ನೊಂದು ತಂಡವನ್ನು ಕುಲು ಮನಾಲಿಗೆ ರವಾನಿಸಿದ್ದು, ಬಿಜೆಪಿಯ ಬಂಡಾಯ ಅಭ್ಯರ್ಥಿ ಶಿವರಾಜ್ ತಂಗಡಗಿಯನ್ನು ಗುಪ್ತ ಸ್ಥಳವೊಂದರಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
|