ರಾಜ್ಯದ ಹೈನುಗಾರರು ತೀವ್ರ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಭಾವೀ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅವರು ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಭರವಸೆ ನೀಡಿದರು.
ರಾಜ್ಯದ ಹೈನುಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅದಕ್ಕಾಗಿ ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಸಹಾಯಧನ ನೀಡಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದರು. ಅಂತೆಯೇ ಮೈಷುಗರ್ ಸಕ್ಕರೆ ಕಾರ್ಖಾನೆ ಪುನಶ್ವೇತನಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.
ನಮ್ಮ ಸರಕಾರ ರಾಜ್ಯದ ಜನತಗೆ ಉತ್ತಮ ಆಡಳಿತ ನೀಡಲಿದ್ದು, ರಾಜ್ಯದ ನೀರಾವರಿ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಸಮ್ಮಿಶ್ರ ಸರಕಾರ ಹಾಗೂ ಅದರ ಕಚ್ಚಾಟದಿಂದ ಜನ ರೋಸಿ ಹೋಗಿ ಒಂದು ಸುಭದ್ರ ಹಾಗೂ ಉತ್ತಮ ಆಡಳಿತ ನೀಡುವ ಸರಕಾರವನ್ನು ಯಡಿಯೂರಪ್ಪನವರಿಂದ ಎದುರು ನೋಡುತ್ತಿದ್ದಾರೆ.
|