ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಸನ: ದಿಬ್ಬಣದ ಲಾರಿ ಕೆರೆಗೆ ಉರುಳಿ 40 ಸಾವು  Search similar articles
ಹಾಸನ: ಅರಕಲಗೂಡು ಬಳಿ ಮದುವೆ ದಿಬ್ಬಣಕ್ಕೆ ಹೊರಟಿದ್ದ ಲಾರಿ ಕೆರೆಗೆ ಉರುಳಿ ಬಿದ್ದು ಕನಿಷ್ಠ 40 ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಗುರುವಾರ ಮಧ್ಯಾಹ್ನ ಬಸವನಹಳ್ಳಿಕೊಪ್ಪದಿಂದ ಹೊರಟ ಲಾರಿ ರಾಮನಾಥಪುರ ಅಗ್ರಹಾರಕ್ಕೆ ತಲುಪಬೇಕಿತ್ತು. ಲಾರಿಯಲ್ಲಿ ಸುಮಾರು 120 ಜನರಿದ್ದರು ಎಂದು ತಿಳಿದುಬಂದಿದೆ.

ಘಟನೆ ವಿವರ:
ರಸ್ತೆಯಲ್ಲಿ ತೀರ ಕೆಳಭಾಗದಲ್ಲಿದ್ದ ಹೈಟೆನ್ಶನ್ ವಿದ್ಯುತ್ ತಂತಿ ಲಾರಿಗೆ ತಗುಲುತ್ತದೆಂದು ಲಾರಿಯನ್ನು ತಿರುಗಿಸಲು ಚಾಲಕ ಪ್ರಯತ್ನಿಸಿದ. ಈ ಸಮಯದಲ್ಲಿ ಚಾಲಕನ ಹಿಡಿತಕ್ಕೆ ಸಿಗದ ಲಾರಿ ಪಕ್ಕದಲ್ಲಿದ್ದ ಸುಮಾರು 100 ಅಡಿ ಆಳದ ಕೆರೆಗೆ ಬಿದ್ದಿದ್ದರಿಂದ ದುರಂತ ಸಂಭವಿಸಿದೆ.

ಗಾಯಾಳುಗಳನ್ನು ಅರಕಲಗೂಡಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ರಕ್ಷಣಾಪಡೆ ಮತ್ತು ವೈದ್ಯರ ತಂಡ ಭೇಟಿ ನೀಡಿ ಪರಿಹಾರ ಕಾರ್ಯದಲ್ಲಿ ತೊಡಗಿವೆ.

ದೌಡಾಯಿಸಿದ ಶಾಸಕ:
ಘಟನೆ ತಿಳಿದ ಕೂಡಲೇ ಬೆಂಗಳೂರಿನಲ್ಲಿದ್ದ ಅರಕಲಗೂಡಿನ ಶಾಸಕ ಮಂಜು ಅವರು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯದಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ. ಸಂತ್ರಸ್ತರಿಗೆ ಸರ್ಕಾರದಿಂದ ಸೂಕ್ತ ನೆರವು ಕೊಡಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ.
ಮತ್ತಷ್ಟು
ಯಡಿಯೂರಪ್ಪರಿಂದ ಹಾಲಿಗೆ ಸಹಾಯಧನ ಘೋಷಣೆ
ಉಭಯ ಸದನಗಳಲ್ಲಿ ಅಮ್ಮ-ಮಗ
ಮೂವರು ಪಕ್ಷೇತರರಿಗೆ ಮೋದಿ ಆತಿಥ್ಯ
ಸುಳ್ಳು ಪ್ರಮಾಣ ಪತ್ರ: ಲಾಡ್ ವಿರುದ್ಧ ದೋಷಾರೋಪ
ಧಾರ್ಮಿಕ ಯಾತ್ರೆಯಲ್ಲಿ ಯಡಿಯೂರಪ್ಪ
ಅಂ. ರಾ.ವಿಗೆ ದೇವನಹಳ್ಳಿ ಹೆಸರೇ ಸೂಕ್ತ: ದಸಂಸ