ಉಗ್ರಗಾಮಿಗಳ ಬಂಧನ ಸತ್ರ ಮುಂದುವರಿದಿದ್ದು, ಬೆಳಗಾವಿಯಲ್ಲಿ ಬುಧವಾರ ಒಬ್ಬನ ಬಂಧನದ ಬೆನ್ನಿಗೇ ಗುರುವಾರ ಇನ್ನೂ ಇಬ್ಬರು ಶಂಕಿತ ಉಗ್ರಗಾಮಿಗಳು ಎಪಿಎಂಸಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗುರುವಾರ ಸಂಜೆ ಬೆಳಗಾವಿಯಲ್ಲಿ ಈ ಇಬ್ಬರು ಶಂಕಿತ ಉಗ್ರರ ಬಂಧನವಾಗಿದ್ದು, ಅವರನ್ನು ಇಮ್ತಿಯಾಜ್ ಮತ್ತು ನಯೀಮ್ ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
|