13ನೇ ವಿಧಾನಸಭೆಯಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರ ಪಟ್ಟಾಭಿಷೇಕಕ್ಕೆ ಕ್ಷಣ ಗಣನೆ ನಡೆಯುತ್ತಿದ್ದು, ಶುಕ್ರವಾರ ಇವರೊಂದಿಗೆ ಸುಮಾರು 21 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ.
ಮುಖ್ಯವಾಗಿ ಪಕ್ಷೇತರರಾದ ವೆಂಕಟರಮಣಪ್ಪ, ಡಿ.ಸುಧಾಕರ್, ನಾಗರಾಜ್ ಅವರು ಸಚಿವ ಪಟ್ಟ ಪಡೆಯಲಿದ್ದರೆ, ಬಿಜೆಪಿಯವರೇ ಆದ ಮಮ್ತಾಜ್ ಅಲಿ ಖಾನ್, ಅರವಿಂದ ಲಿಂಬಾವಳಿ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಆರ್.ಅಶೋಕ್, ಸಿ.ಎಂ.ಉದಾಸಿ, ಕರುಣಾಕರ ರೆಡ್ಡಿ, ಶ್ರೀರಾಮುಲು, ಕೆ.ಎಸ್.ಈಶ್ವರಪ್ಪ, ಶಂಕರಲಿಂಗೇ ಗೌಡ, ವಿ.ಎಸ್.ಆಚಾರ್ಯ, ಕೃಷ್ಣ ಪಾಲೆಮಾರ್, ಕಾಗೇರಿ ವಿಶ್ವೇಶ್ವರ ಹೆಗಡೆ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಪ್ಪಚ್ಚು ರಂಜನ್ ಮುಂತಾದವರು ಸಚಿವ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ಶುಕ್ರವಾರ ಮಧ್ಯಾಹ್ನ 1.55ರ ವೇಳೆಗೆ ಬಿಜೆಪಿ ಸಚಿವ ಸಂಪುಟವು ಪ್ರಮಾಣವಚನ ಸ್ವೀಕರಿಸಲಿದ್ದು, ಹಲವು ತಿಂಗಳಿಂದ ಇದ್ದ ರಾಷ್ಟ್ರಪತಿ ಆಳ್ವಿಕೆ ಔಪಚಾರಿಕವಾಗಿ ಅಂತ್ಯವಾಗಲಿದೆ.
|