ಕರುನಾಡಿನಲ್ಲಿ ಅರಳಿದ ಕಮಲದ ಸರಕಾರ
|
|
|
|
|
ಬೆಂಗಳೂರು, ಶುಕ್ರವಾರ, 30 ಮೇ 2008( 20:01 IST )
|
|
|
|
|
|
|
|
ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ(65) ಶುಕ್ರವಾರ 29 ಮಂದಿ ಸಹೋದ್ಯೋಗಿಗಳೊಂದಿಗೆ ಅಧಿಕಾರ ಸ್ವೀಕರಿಸಿದರು. ವಿಧಾನ ಸೌಧದ ಎದುರು ಏರ್ಪಡಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ನೂತನ ಮುಖ್ಯಮಂತ್ರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಬಿಳಿ ಸಫಾರಿ ತೊಟ್ಟು, ದೇವರ ಬೊಟ್ಟು ಇಟ್ಟು, ಹಸಿರು ಶಾಲು ಹೊದ್ದಿದ್ದ ಯಡಿಯೂರಪ್ಪ ಅವರು ಹದಿಮೂರನೆಯ ವಿಧಾನ ಸಭೆಯ ನೂತನ ಸರಕಾರದ ಮುಖ್ಯಮಂತ್ರಿಯಾಗಿ ರೈತರು ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಯಡಿಯೂರಪ್ಪ ಅವರೊಂದಿಗೆ 29 ಮಂದಿ ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ಮಹಿಳಾ ಮಂತ್ರಿಯಾಗಿ ಶೋಭಾ ಕರಂದ್ಲಾಜೆ, ಬಿಜೆಪಿಗೆ ಬೆಂಬಲ ನೀಡಿದ ಪಕ್ಷೇತರ ಶಾಸಕರಾದ ನರೇಂದ್ರ ಸ್ವಾಮಿ, ಗೂಳಿ ಹಟ್ಟಿ ಶೇಖರ್, ವೆಂಕಟರವಣಪ್ಪ ಸೇರಿದಂತೆ ನೂತನ ಮಂತ್ರಿಗಳೂ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಬರಿಯ ಏಳು ದಿನಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಈ ಚುನಾವಣೆಯಲ್ಲಿ ಪಕ್ಷವು ಗೆದ್ದು ಅಧಿಕಾರ ಹಿಡಿಯುತ್ತಿದ್ದು, ಯಡಿಯೂರಪ್ಪ ಮತ್ತೊಮ್ಮೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು ಯಡಿಯೂರಪ್ಪ ಅವರೊಂದಿಗೆ 29 ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಗೋವಿಂದ ಕಾರಜೋಳ, ವಿ.ಎಸ್. ಆಚಾರ್ಯ, ಕೆ.ಎಸ್. ಈಶ್ವರಪ್ಪ, ರಾಮಚಂದ್ರ ಗೌಡ, ಮುಮ್ತಾಜ್ ಅಲಿಖಾನ್, ಸಿ.ಎಂ. ಉದಾಸಿ, ಆರ್. ಅಶೋಕ್, ಎಸ್.ಎ. ರವೀಂದ್ರ ನಾಥ, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಬಚ್ಚೇ ಗೌಡ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಶೋಭಾ ಕರಂದ್ಲಾಜೆ, ಕೃಷ್ಣ ಪಾಲೆಮಾರ್, ರೇವೂ ನಾಯಕ ಬೆಳಮಗಿ, ಸುರೇಶ್ ಕುಮಾರ್, ವೆಂಕಟರವಣಪ್ಪ, ಅರವಿಂದ ಲಿಂಬಾವಳಿ, ಕೃಷ್ಣಯ್ಯ ಶೆಟ್ಟಿ, ಪಿ.ಎಂ.ನರೇಂದ್ರ ಸ್ವಾಮಿ, ಹಾಲಪ್ಪ, ಡಿ.ಸುಧಾಕರ, ಲಕ್ಷ್ಮಣ ಸಂಗಪ್ಪ ಸವದಿ, ಗೂಳಿಹಟ್ಟಿ ಶೇಖರ್, ರುದ್ರಪ್ಪ ನಿರಾಣಿ, ಶಿವರಾಜ್ ತಂಗಡಗಿ, ಎಸ್.ಕೆ.ಬೆಳ್ಳುಬ್ಬಿ ಅವರು ಸಂಪುಟ ಸೇರಿದವರು.
ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಳ್ಳುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಇದೇ ಸಂದರ್ಭದಲ್ಲಿ ಹಿರಿಯ ನಾಯಕರುಗಳಾದ, ಎಲ್.ಕೆ.ಆಡ್ವಾಣಿ, ನರೇಂದ್ರ ಮೋದಿ, ವೆಂಕಯ್ಯ ನಾಯ್ಡು, ಎನ್‌ಡಿಎ ಸಂಚಾಲಕ ಜಾರ್ಜ್ ಫರ್ನಾಂಡಿಸ್, ಗೋಪಿನಾಥ್ ಮುಂಡೆ, ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಮನೇಕಾ ಗಾಂಧಿ, ಮುಖ್ಯಮಂತ್ರಿ ಮೊದಲಾದ ಪ್ರಮುಖರು ಹಾಜರಿದ್ದರು.
ಸಚಿವರಾದ ಸ್ವತಂತ್ರರು ಬಿಜೆಪಿಗೆ ಬೆಂಬಲ ನೀಡಿರುವ ಆರು ಪಕ್ಷೇತರರಲ್ಲಿ ಐದು ಮಂದಿ ಸಂಪುಟ ದರ್ಜೆ ಸಚಿವರಾಗಿದ್ದರೆ. ವೆಂಕಟರಮಣಪ್ಪ(ಪಕ್ಷೇತರ), ಡಿ.ಸುಧಾಕರ್(ಪಕ್ಷೇತರ), ನರೇಂದ್ರಸ್ವಾಮಿ(ಪಕ್ಷೇತರ), ಗೂಳಿಹಟ್ಟಿ ಚಂದ್ರಶೇಖರ್ (ಪಕ್ಷೇತರ), ಶಿವರಾಜ್ ತಂಗಡಗಿ(ಪಕ್ಷೇತರ) ಎಲ್ಲರೂ ಸಂಪುಟ ದರ್ಜೆ ಸಚಿವರು.
ಇನ್ನೊಬ್ಬ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ಅವರಿಗೆ ಸಚಿವ ಸ್ಥಾನ ಈ ಕಂತಿನಲ್ಲಿ ಲಭಿಸಿಲ್ಲ.
ಕಾರ್ಯಕರ್ತರ ಸಂಭ್ರಮ: ಯಡಿಯೂರಪ್ಪನವರು ವೇದಿಕೆಗೆ ಆಗಮಿಸುತ್ತಿದ್ದಂತೆ ಸಮಾರಂಭದಲ್ಲಿ ಹಾಜರಿದ್ದ ಸಾವಿರಾರು ಕಾರ್ಯಕರ್ತರು ಘೋಷಣೆಗಳನ್ನು ಕೂಗುವುದರೊಂದಿಗೆ ಸ್ವಾಗತಿಸಿದರು. ವಿಧಾನಸೌಧ ಸುತ್ತಲೂ ನೆರೆದಿದ್ದ ಕಾರ್ಯಕರ್ತರು ಸಂಭ್ರಮದಿಂದ ಪ್ರಮಾಣ ವಚನ ಕಾರ್ಯಕ್ರಮವನ್ನು ವೀಕ್ಷಿಸಿದರು.
ಹರಿದು ಬಂದ ಜನಸಾಗರ: ಪ್ರಥಮ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದು, ಬಿಜೆಪಿ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ರಾಜ್ಯಾದ್ಯಂತ ಕಾರ್ಯಕರ್ತರು ರಾಜಧಾನಿಗೆ ಹರಿದು ಬಂದಿದ್ದಾರೆ. ಬೆಂಗಳೂರಿನೆಲ್ಲೆಡೆ ಕೇಸರಿ ಧ್ವಜ, ಬಿಜೆಪಿ ಧ್ವಜಗಳು ರಾರಾಜಿಸುತ್ತಿತ್ತು ಬೆಂಗಳೂರಿಡೀ ಕೇಸರಿ ಮಯವಾಗಿದೆ.
|
|
|
|