ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುನಿಸಿಕೊಂಡ ಹಿರಿಯ ಶಾಸಕ ಶಂಕರಲಿಂಗೇಗೌಡ  Search similar articles
ಕೊನೆಕ್ಷಣದ ರಾಜಕೀಯ ಬೆಳವಣಿಗೆಯಿಂದಾಗಿ ಸಚಿವ ಸ್ಥಾನ ಕೈ ತಪ್ಪಿದ ಮೈಸೂರಿನ ಹಿರಿಯ ಶಾಸಕ ಶಂಕರಲಿಂಗೇಗೌಡ ಅವರು ಅಸಮಾಧಾನದಿಂದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿಲ್ಲ.

ಪ್ರಾಥಮಿಕ ಹಂತದಲ್ಲಿ ಸಿದ್ಧಪಡಿಸಲಾದ ಸಂಭಾವನೀಯರ ಪಟ್ಟಿಯಲ್ಲಿ ಗೌಡರ ಹೆಸರಿತ್ತು. ಅದರೆ ಕೊನೆ ಕ್ಷಣದ ಬೆಳವಣಿಗೆಯಲ್ಲಿ ಒಕ್ಕಲಿಗರ ಕೋಟಾ ಹೆಚ್ಚಾಗಿದ್ದು ಹಾಗೂ ಮೈಸೂರು ಜಿಲ್ಲೆಯ ಪ್ರಾತಿನಿಧ್ಯ ಕೂಡ ಅಧಿಕವಾಗಿದ್ದರಿಂದ ಅವರನ್ನು ಸಂಪುಟದಿಂದ ಕೈ ಬಿಡಲಾಯಿತು.

ಈ ಮೊದಲು ಹಿಂದಿನ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಕೊನೆಗಳಿಗೆಯಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಗೌಡರೂ ಈ ಬಾರಿಯೂ ಅವಕಾಶ ದೊರೆಯದಿದ್ದುದರಿಂದ ಬೇಸರಗೊಂಡು ಸಮಾರಂಭಕ್ಕೆ ಆಗಮಿಸದೆ ಸ್ವಕ್ಷೇತ್ರಕ್ಕೆ ಮರಳಿದ್ದಾರೆ.

ಈ ಮಧ್ಯೆ ಶಾಸಕ ಜಗದೀಶ್ ಶೆಟ್ಟರ್‌ಗೆ ಸಚಿವ ಸ್ಥಾನ ನಿರಾಕರಿಸಿರುವುದನ್ನು ವಿರೋಧಿಸಿರುವ ಹುಬ್ಬಳ್ಳಿ-ಧಾರವಾಡದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ನೂತನ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಇದರಿಂದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ನಿಯಂತ್ರಣಕ್ಕಾಗಿ ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.
ಮತ್ತಷ್ಟು
ಮುಖ್ಯಮಂತ್ರಿಯ ಚೊಚ್ಚಲ ಪತ್ರಿಕಾಗೊಷ್ಠಿ
ಲೋಕಸಭೆ ಇಲ್ಲವೇ ಮಹಾರಾಷ್ಟ್ರಕ್ಕೆ ಧರ್ಮಸಿಂಗ್
ರಾಜ್ಯಪಾಲ ಆಡಳಿತದ ವರದಿ ಸಲ್ಲಿಕೆ
ಸ್ಪೀಕರ್ ಸ್ಥಾನ ನಿರಾಕರಿಸಿದ ಶೆಟ್ಟರ್
ಕರುನಾಡಿನಲ್ಲಿ ಅರಳಿದ ಕಮಲದ ಸರಕಾರ
ಬಿಜೆಪಿ ಸಂಪುಟ: ಯಾರಿಗೆ ಯಾವ ಖಾತೆ?