ಎರಡು ದಿನಗಳ ಹಿಂದೆಯಷ್ಟೇ ಬಂಧಿಸಲಾಗಿರುವ ಶಂಕಿತ ಭಯೋತ್ಪಾದಕರು ಮೇ 22ರಂದು ನಡೆದ ಮೂರನೇ ಹಂತದ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಯೊಂದರಲ್ಲಿ ಬಾಂಬ್ ಸ್ಪೋಟ ಮಾಡುವ ಸಂಚು ರೂಪಿಸಿದ್ದರೆಂಬ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ಈ ಸಂಚಿಗೆ ಮಹಾಂತೇಶ ನಗರದ ಲಿಯಾಖತ್ ಅಲಿ ಅಬ್ದುಲ್ ಗಣಿ ಸೈಯದ್ ರೂವಾರಿಯಾಗಿದ್ದ ಎಂದು ತಿಳಿದು ಬಂದಿದೆ. ಈತ ತನ್ನ ಲ್ಯಾಪ್‌ಟಾಪ್‌ನಲ್ಲಿ ಇದ್ದ ಬಾಂಬ್ ತಯಾರಿಸುವ ಮಾಹಿತಿಯನ್ನು ಬಳಸಿ ಶಿಂಧೊಳ್ಳಿಯ ತನ್ನ ಸಂಬಂಧಿಕರ ಮನೆಯಲ್ಲಿ ಪ್ರಯೋಗ ಮಾಡಿದ್ದ ಎಂದು ತಿಳಿದು ಬಂದಿದೆ.
ಈ ಮೂಲಕ ಬೆಳಗಾವಿಯ ಟಿಳಕವಾಡಿಯ ಮತಗಟ್ಟೆಯೊಂದರಲ್ಲಿ ಸಿಲಿಂಡರ್ ಬಾಂಬ್ ಸ್ಪೋಟಿಸುವ ಸಂಚು ರೂಪಿಸಿದ್ದ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಶಂಕಿತ ಉಗ್ರರು ನಿಷೇಧಿತ ಸಿಮಿ ಸಂಘಟನೆಯ ಜೊತೆ ನೇರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಲಂಡನ್ನಲ್ಲಿ ವಾಸವಾಗಿದ್ದ ಸೈಯದ್ ತಂಗಿ ಮದುವೆಗಾಗಿ ಭಾರತಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಇವರೆಗೆ ನಡೆಸಿದ ಕಾರ್ಯಾಚರಣೆಯಿಂದ ಅಜಮ್ ನಗರದಲ್ಲಿ ವಾಸಿಸುತ್ತಿದ್ದ ನಯೀಮ್ ಮತ್ತು ನಾಸೀರ್ ಲಿಯಾಖತ್ ಪಟೇಲ್‌ರನ್ನು ಬಂಧಿಸಿದ್ದರೆ. ಮಾಳ ಮಾರುತಿ ಪೊಲೀಸರು ಅಬ್ದುಲ್ ಗಣಿ ಸೈಯ್ಯದ್‌ನನ್ನು ಬಂಧಿಸಲಾಗಿದೆ.
|