ಮುಂದಿನ ತಿಂಗಳು ನಾಲ್ಕರಂದು ನಡೆಯಲಿರುವ ಅಧಿವೇಶನದಲ್ಲಿ ಬಹುಮತ ಸಾಬೀತು ಪಡಿಸಿದ ಬಳಿಕವೇ ಜಂಟಿ ಅಧಿವೇಶನದಲ್ಲಿ ಭಾಗವಹಿಸುವುದಾಗಿ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಸ್ಪಷ್ಟ ಪಡಿಸುವ ಮೂಲಕ ಯಡಿಯೂರಪ್ಪನವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಜೂನ್ 4,5 ಮತ್ತು 6ರಂದು ನಡೆಯಲಿರುವ ವಿಶೇಷ ಅಧಿವೇಶನವನ್ನು ನಡೆಸುವಂತೆ ರಾಜ್ಯಪಾಲರಲ್ಲಿ ಕೇಳಿಕೊಂಡ ಬಿಜೆಪಿಗೆ ರಾಜ್ಯಪಾಲರು ಈ ಉತ್ತರ ನೀಡಿದ್ದಾರೆ.
ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ನಿರಾಕರಿಸಿರುವ ರಾಜ್ಯಪಾಲರು, ಬಿಜೆಪಿ ಮೊದಲು ವಿಶ್ವಾಸಮತ ಯಾಚಿಸಲಿ ಎಂದು ತಿಳಿಸಿದ್ದಾರೆ. ರಾಜ್ಯಪಾಲರ ಈ ಹೊಸ ಸಂಪ್ರದಾಯಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ರಾಜ್ಯಪಾಲರು ಕಾಂಗ್ರೆಸ್ ಏಜೆಂಟರೆಂಬುದು ಸಾಬೀತಾಗಿದ್ದು, ರಾಜ್ಯಪಾಲರ ರಾಜೀನಾಮೆಗೆ ಒತ್ತಾಯ ತಂದಿದ್ದಾರೆ. ಸ್ಪಷ್ಟ ಬಹುಮತ ಇರುವ ಸಂದರ್ಭದಲ್ಲಿ ವಿಶ್ವಾಸಮತದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ.
|