ಆನೇಕಲ್ ಶಾಸಕ ನಾರಾಯಣ ಸ್ವಾಮಿಯವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿರುವ ನಾರಾಯಣ ಸ್ವಾಮಿ ಬೆಂಬಲಿಗರು ಕರೆ ನೀಡಿದ್ದ ಆನೇಕಲ್ ಬಂದ್ ಯಶಸ್ವಿಯಾಗಿದೆ.
ಸ್ಥಳೀಯ ಬಿಜೆಪಿ ಕಾರ್ಯಕರ್ತರು ಬಂದ್‌ಗೆ ಕರೆ ನೀಡಿದ್ದರಿಂದ ಸರ್ಕಾರಿ ವಾಹನಗಳು, ಖಾಸಗಿ ವಾಹನಗಳು ಸ್ಥಗಿತಗೊಂಡಿದ್ದವು. ಇದರಿಂದ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಪ್ರಾರಂಭದಲ್ಲಿ ಬಂದ್ ಶಾಂತಿಯುತವಾಗಿದ್ದರೂ, ಬಳಿಕ ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು ನಿಂತಿದ್ದ ಬಸ್‌ಗಳಿಗೆ ಕಲ್ಲೂತೂರಾಟ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ನಾರಾಯಣ ಸ್ವಾಮಿಯವರಿಗೆ ಮಂತ್ರಿ ಸ್ಥಾನ ನೀಡಿದಿರುವ ಬಗ್ಗೆ ಕಾರ್ಯಕರ್ತರು ಅತೃಪ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಶಾಸಕರಾದ ನಾರಾಯಣ ಸ್ವಾಮಿ ಕಾರ್ಯಕರ್ತರಲ್ಲಿ ಮನವಿ ಮಾಡಿದರೂ, ಕಿವಿಗೊಡದ ಕಾರ್ಯಕರ್ತರು ಬಂದ್‌ಗೆಕರೆ ನೀಡಿದ್ದರು.
|