ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಗಾರು ಮಳೆಗೆ ಏಳು ಬಲಿ  Search similar articles
ರಾಜ್ಯದ ವಿವಿಧೆಡೆ ಸಿಡಿಲು ಸೇರಿದಂತೆ ಸುರಿದ ಭಾರಿ ಮಳೆಗೆ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಒಂದು ದಿನದ ಬಳಿಕ ಕರ್ನಾಟಕಕ್ಕೆ ಮುಂಗಾರು ಮಾರುತ ಪ್ರವೇಶಿಸುತ್ತದೆ. ಆದರೆ ಅದಕ್ಕೂ ಮೊದಲೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹುಬ್ಬಳ್ಳಿ-ಧಾರವಾಡ, ಕೊಪ್ಪಳ, ಗದಗ, ಬಳ್ಳಾರಿ, ಕಾರವಾರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿರುವ ವರದಿ ಬಂದಿದೆ. ಇದರಿಂದಾಗಿ ದೂರವಾಣಿ ಸಂಪರ್ಕ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಅಲ್ಲದೆ, ಮಳೆಯಿಂದಾಗಿ ಮರಗಳು ಉರುಳಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮಳೆಗೆ ಉದ್ಯಾನನಗರಿ ತತ್ತರ

ಮುಂಗಾರು ರಾಜ್ಯ ಪ್ರವೇಶಸಿದ ಮುನ್ನಾ ದಿನವೇ ಸುರಿದ ಭಾರಿ ಮಳೆಗೆ ಉದ್ಯಾನನಗರಿ ತತ್ತರಿಸಿ ಹೋಗಿದೆ. ಶನಿವಾರ ಸಂಜೆಯ ವೇಳೆಗೆ ಸುರಿದ ಮಳೆಯಿಂದಾಗಿ ಹಿಂದೆಂದೂ ಕಾಣದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಮುಖ್ಯವಾಗಿ ಟ್ರಾಫಿಕ್ ಜಾಮ್‌‌ನಿಂದಾಗಿ ಅರ್ಧಗಂಟೆಯಲ್ಲಿ ತೆರಳಬೇಕಾದವರು ಮಳೆಯಿಂದಾಗಿ ಮೂರುಗಂಟೆಯಾದರೂ ರಸ್ತೆ ಮಧ್ಯದಲ್ಲಿಯೇ ನಿಲ್ಲಬೇಕಾಯಿತು. ಬಹುತೇಕ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಜನತೆ ರೋಸಿ ಹೋಗಿದ್ದರು. ರಸ್ತೆಯ ತುಂಬೆಲ್ಲಾ ನೀರು ಹರಿದು ದ್ವಿಚಕ್ರ ವಾಹನಗಳು ನೀರಿನಲ್ಲಿ ತೇಲಿದವು. ರಸ್ತೆಯ ಮೇಲೆ ಮರ ಬಿದ್ದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದೆ. ಅಲ್ಲದೆ, ಮಳೆಯ ನೀರಿಗೆ ಸಿಲುಕಿ ಬಿಎಂಟಿಸಿ ಬಸ್ ಅರ್ಧದಷ್ಟು ಮುಳುಗಿತ್ತು. ಆದರೆ ನಗರದಲ್ಲಿ ಎಲ್ಲಿಯೂ ಸಾವು ನೋವಾಗಿರುವ ವರದಿ ಬಂದಿಲ್ಲ.
ಮತ್ತಷ್ಟು
ನಾಟಕ ನೋಡುತ್ತಿದ್ದಾಗ ಚಾವಣಿ ಕುಸಿದು 3 ಸಾವು
ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ
ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಅಸಮಾಧಾನ
ಅರಕಲಗೂಡು ಅಪಘಾತ: ಒಂದು ಲಕ್ಷ ರೂ ಪರಿಹಾರ
ಸ್ಪೀಕರ್ ಸ್ಥಾನ ಬೇಡವೆ ಬೇಡ: ಶೆಟ್ಟರ್
ಮು.ಮಂತ್ರಿ ಪ್ರ. ಕಾರ್ಯದರ್ಶಿಯಾಗಿ ಬಳಿಗಾರ್