ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನನ್ನದು ಸೇಡಿನ ರಾಜಕಾರಣವಲ್ಲ: ಬಿಎಸ್‌ವೈ  Search similar articles
ಹಳೆಯ ಘಟನಾವಳಿಗಳುನ್ನು ಮನದಲ್ಲಿ ಇಟ್ಟುಕೊಂಡು ಸೇಡಿನ ರಾಜಕಾರಣಕ್ಕೆ ಕೈಹಾಕುವ ಪ್ರವೃತ್ತಿ ನನ್ನದಲ್ಲ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ದಿಯೇ ನನ್ನ ಮೊದಲ ಆದ್ಯತೆ. ಸೇಡಿನ ರಾಜಕಾರಣದ ಮೂಲಕ ರಾಜ್ಯದ ಅಭಿವೃದ್ದಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಇದೆ. ಇದಕ್ಕಾಗಿ ಹೊರರಾಜ್ಯಗಳಿಗೆ ಮೊರೆ ಹೋಗಬೇಕಿಲ್ಲ. ರಾಜ್ಯಕ್ಕೆ ಬೇಕಾಗಿರುವಷ್ಟು ವಿದ್ಯುತ್ ರಾಜ್ಯದಲ್ಲಿಯೇ ಉತ್ಪಾದನೆ ಮಾಡಬಹುದು. ಈ ನಿಟ್ಟಿನಲ್ಲಿ ರಾಜ್ಯದ ನದಿಗಳ ಒಂದು ಹನಿ ನೀರನ್ನು ಸಮುದ್ರಕ್ಕೆ ಸೇರಲು ಬಿಡದೆ, ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಆರಂಭಿಸುವುದಾಗಿ ಅವರು ತಿಳಿಸಿದರು.

ತಾವು ಹಿಂದಿನ ಸರ್ಕಾರದಲ್ಲಿ ರೈತರಿಗೆ ನೀಡಿರುವ ಸೌಲಭ್ಯಗಳನ್ನು ಗಮನಿಸಿದಾಗ ರೈತರು ಆತ್ಯಹತ್ಯೆ ಮಾಡಿಕೊಳ್ಳಬಾರದು. ಇದು ಅವರ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮತ್ತಷ್ಟು
ಮುಂಗಾರು ಮಳೆಗೆ ಏಳು ಬಲಿ
ನಾಟಕ ನೋಡುತ್ತಿದ್ದಾಗ ಚಾವಣಿ ಕುಸಿದು 3 ಸಾವು
ದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ
ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಅಸಮಾಧಾನ
ಅರಕಲಗೂಡು ಅಪಘಾತ: ಒಂದು ಲಕ್ಷ ರೂ ಪರಿಹಾರ
ಸ್ಪೀಕರ್ ಸ್ಥಾನ ಬೇಡವೆ ಬೇಡ: ಶೆಟ್ಟರ್