ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋತ ಪಾಟೀಲ್ ವಿಧಾನ ಪರಿಷತ್‌ನತ್ತ  Search similar articles
ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಮುಖಭಂಗ ಅನುಭವಿಸಿರುವ ಮಾಜಿ ಸಚಿವ ಎಚ್.ಕೆ. ಪಾಟೀಲ್, ಈಗ ಮತ್ತೆ ವಿಧಾನಪರಿಷತ್‌‌‌ನತ್ತ ಮುಖ ಮಾಡಿದ್ದಾರೆ.

ಪದವೀಧರ ಮತದಾರರ ಪ್ರತಿನಿಧಿಯಾಗಿ ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಎಚ್.ಕೆ. ಪಾಟೀಲರು ಮತ್ತೆ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಬೇಕೆಂದು ಕ್ಷೇತ್ರದ ಕಾರ್ಯಕರ್ತರು ಒತ್ತಡ ಹೇರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗದಗದಿಂದ ಚುನಾವಣೆಯಲ್ಲಿ ಸೋತ 15 ದಿನಗಳೊಳಗೆ ಮತ್ತೊಂದು ಚುನಾವಣೆ ಎದುರಿಸುವುದು ಸರಿಯಾದೀತೆ ಎಂಬ ಜಿಜ್ಞಾಸೆಯಲ್ಲಿ ಎಚ್.ಕೆ. ಪಾಟೀಲ್ ಇದ್ದಾರೆ. ಆದರೂ, ಧಾರವಾಡ, ಹಾವೇರಿ, ಗದಗ, ಕಾರವಾರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಮರು ಪ್ರವೇಶಕ್ಕೆ ಅವರು ಚಿಂತನೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳಿ ತಿಳಿಸಿವೆ.

ಎಚ್.ಕೆ. ಪಾಟೀಲರು ವಿಧಾನಸಭೆ ಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಸೋಲನ್ನು ಅನುಭವಿಸಿರುವುದು ಕಾರ್ಯಕರ್ತರಿಗೂ ಆಘಾತವಾಗಿದೆ. ಈ ನಿಟ್ಟಿನಲ್ಲಿ ತಮ್ಮ ನಾಯಕ ಮತ್ತೆ ವಿಧಾನಪರಿಷತ್ ಮೂಲಕ ಸಕ್ರೀಯ ರಾಜಕಾರಣದಲ್ಲಿ ಇರಬೇಕು ಎಂದು ಕಾರ್ಯಕರ್ತರು ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ.
ಮತ್ತಷ್ಟು
ಕಿಮ್ಸ್ ಅಧಿಕ್ಷಕ ಶೂಟೌಟ್ ಪ್ರಕರಣ: ನಾಲ್ವರ ಬಂಧನ
ಸೋಮವಾರ ನ್ಯಾಯಾಲಯಕ್ಕೆ ಕರೀಂ ತೆಲಗಿ
ರಾಜ್ಯಪಾಲರ ಕ್ರಮ ಸರಿ: ಖರ್ಗೆ
ನನ್ನದು ಸೇಡಿನ ರಾಜಕಾರಣವಲ್ಲ: ಬಿಎಸ್‌ವೈ
ಮುಂಗಾರು ಮಳೆಗೆ ಏಳು ಬಲಿ
ನಾಟಕ ನೋಡುತ್ತಿದ್ದಾಗ ಚಾವಣಿ ಕುಸಿದು 3 ಸಾವು