ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖಾತೆಗಾಗಿ ಕ್ಯಾತೆ ತೆಗೆದಿಲ್ಲ : ಜನಾರ್ಧನ ರೆಡ್ಡಿ  Search similar articles
ಉಪಮುಖ್ಯಮಂತ್ರಿ, ಗೃಹ ಸೇರಿದಂತೆ ಇಂತಹುದೇ ಖಾತೆ ನೀಡುವಂತೆ ನಾಯಕರಲ್ಲಿ ಯಾವುದೇ ರೀತಿಯ ಒತ್ತಡ ಹೇರಿಲ್ಲ ಎಂದು ನೂತನ ಸಂಪುಟ ಸಚಿವರಾಗಿರುವ ಜನಾರ್ಧನ ರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನಗೆ ಅಥವಾ ನನ್ನ ಸಹೋದರರಿಗೆ ಇಂತಹ ಹುದ್ದೆ ನೀಡಬೇಕೆಂಬುದರ ಬಗ್ಗೆ ಎದ್ದಿರುವ ಊಹಾಪೋಗಳಲ್ಲಿ ಯಾವುದೇ ಹುರುಳಿಲ್ಲ. ಈ ಹುದ್ದೆ ನನಗೆ ಅನೀರೀಕ್ಷಿತವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಗದ್ದುಗೆ ಮೇಲೆ ಯಡಿಯೂರಪ್ಪನವರನ್ನು ಕೂರಿಸಬೇಕೆಂಬುದು ಹೆಬ್ಬಯಕೆಯಾಗಿತ್ತು. ಅದು ಪೂರ್ಣವಾಗಿದೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿರುವ ತಾವು ಮುಖಂಡರು ವಹಿಸುವ ಯಾವುದೇ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸುವುದಾಗಿ ತಿಳಿಸಿದ್ದಾರೆ.

ಸರ್ಕಾರದ ರಚನೆಯಲ್ಲಿ ನಮ್ಮದೇನೂ ಪಾತ್ರವಿಲ್ಲ. ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಕರ್ತವ್ಯ ನಿರ್ವಹಿಸಿದ್ದೇವೆ. ಸರ್ಕಾರ ರಚನೆಯಲ್ಲಿ ನಮ್ಮದು ಪ್ರಧಾನ ಪಾತ್ರವಿದೆ ಎಂದು ಬಿಂಬಿಸಬಾರದು ಎಂದು ತಿಳಿಸಿದರು.
ಮತ್ತಷ್ಟು
ಸೋತ ಪಾಟೀಲ್ ವಿಧಾನ ಪರಿಷತ್‌ನತ್ತ
ಕಿಮ್ಸ್ ಅಧಿಕ್ಷಕ ಶೂಟೌಟ್ ಪ್ರಕರಣ: ನಾಲ್ವರ ಬಂಧನ
ಸೋಮವಾರ ನ್ಯಾಯಾಲಯಕ್ಕೆ ಕರೀಂ ತೆಲಗಿ
ರಾಜ್ಯಪಾಲರ ಕ್ರಮ ಸರಿ: ಖರ್ಗೆ
ನನ್ನದು ಸೇಡಿನ ರಾಜಕಾರಣವಲ್ಲ: ಬಿಎಸ್‌ವೈ
ಮುಂಗಾರು ಮಳೆಗೆ ಏಳು ಬಲಿ