ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭ್ರಷ್ಟಾಚಾರ ತಡೆಗೆ ಆದ್ಯತೆ: ಯಡಿಯೂರಪ್ಪ  Search similar articles
ಹಿಂದಿನ ಸರಕಾರಗಳ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರದ ಪ್ರಕರಣಗಳ ಕೂಲಂಕುಷ ತನಿಖೆಗೆ ಭಾರತೀಯ ಜನತಾ ಪಕ್ಷದ ಸರಕಾರವು ಆದ್ಯತೆಯನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಕಟಿಸಿದ್ದಾರೆ.

ನವದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ನಂತರ ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದಿನ ಸರಕಾರಗಳ ಭ್ರಷ್ಟಾಚಾರವನ್ನು ತನಿಖೆಗೆ ಒಳಪಡಿಸುವಿರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ತಕ್ಷಣ ಭ್ರಷ್ಟಾಚಾರದ ದೂರುಗಳ ಕುರಿತು ತನಿಖೆ ನಡೆಸಲು ಆದೇಶಿಸುತ್ತೇನೆ. ಭ್ರಷ್ಟಾಚಾರವನ್ನು ಯಾವುದೇ ಹಂತದಲ್ಲಿಯೂ ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಎಲ್ಲ ಪಕ್ಷಗಳ ನಾಯಕರೊಂದಿಗೆ ಸೌಹಾರ್ಧಯುತ ಸಂಬಂಧಗಳನ್ನು ಕಾಯ್ದುಕೊಂಡು ಸರಕಾರ ನಡೆಸುವೆ ಎಂದು ಹೇಳಿದ ಅವರು ವಿರೋಧ ಪಕ್ಷಗಳೊಂದಿಗೆ ಸಂಘರ್ಷಕ್ಕೆ ಇಳಿಯುವುದಿಲ್ಲ. ಜೆಡಿಎಸ್ ನಾಯಕ ಮಾಜಿ ಪ್ರಧಾನಿ ಎಚ್. ಡಿ. ದೇವೆಗೌಡರನ್ನು ಈ ಸಂದರ್ಭದಲ್ಲಿ ಟೀಕಿಸಿದ ಯಡಿಯೂರಪ್ಪನವರು, ಒಪ್ಪಂದದ ಪ್ರಕಾರ ತನಗೆ 20 ತಿಂಗಳುಗಳ ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕಾಗಿತ್ತು. ಆದರೆ ಮಾತಿಗೆ ತಪ್ಪಿಗೆ ದೇವೆಗೌಡರು ಅನೀತಿಯ ರಾಜಕೀಯ ಮಾಡಿದರು ಎಂದು ದೂಷಿಸಿದರು.

ನರೇಂದ್ರ ಮೋದಿ ಮಾದರಿಯ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತದಾ ಎಂದು ಕೇಳಿದ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯಕ್ಕೆ ವಾಜಪೇಯಿ ಮಾದರಿಯ ಸರಕಾರವನ್ನು ನೀಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿಗಳು ಜೂನ್ ನಾಲ್ಕರಿಂದ ಪ್ರಾರಂಭವಾಗಲಿರುವ ವಿಧಾನ ಸಭಾ ಅಧಿವೇಶನದಲ್ಲಿ ವಿಶ್ವಾಸ ಮತದಲ್ಲಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಸಚಿವ ಸ್ಥಾನ ನಿರಾಕರಿಸಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಪೋಟವಾಗುವುದಕ್ಕೆ ಕಾರಣವಾಗಿರುವ ವಿಚಾರದ ಕುರಿತು ಅನಿಸಿಕೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು, ಇನ್ನೆರಡು ದಿನಗಳಲ್ಲಿ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ. ಅಲ್ಲದೇ ಪಕ್ಷದ ನಾಯಕರು ಉಪಮುಖ್ಯಮಂತ್ರಿ ಪದವಿಯ ಕಲ್ಪನೆಗೂ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು
ಸಿಇಟಿ ಕೌನ್ಸಿಲಿಂಗ್‌ಗೆ ಚಾಲನೆ
ಪದವೀಧರ ಕ್ಷೇತ್ರಕ್ಕೆ ಜೂ.26ಕ್ಕೆ ಚುನಾವಣೆ
ಯಡಿಯೂರ್-ಅನಂತ್ ಕುತಂತ್ರ: ಶೆಟ್ಟರ್
ಅಸಂತೃಪ್ತ 'ಸಿದ್ದು' ಕೈ ಬಿಡುತ್ತಾರಾ?
ಹಿಂಸಾಚಾರದ ಪ್ರತಿಭಟನೆ; ಲಾಠಿ ಪ್ರಹಾರ
ಜೂನ್ 23ಕ್ಕೆ ತೆಲಗಿ ವಿಚಾರಣೆ