ಮುಂಗಾರು ಮಳೆಯ ಅರ್ಭಟಕ್ಕೆ ತತ್ತರಿಸಿರುವ ಉದ್ಯಾನನಗರಿಯ ಮಳೆಯಿಂದ ಹಾನೀಗೀಡಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಮಂಗಳವಾರ) ಭೇಟಿ ನೀಡಲಿದ್ದಾರೆ.
ಜೆಪಿನಗರ, ಪುಟ್ಟೇನಹಳ್ಳಿ, ನಾಯಂಡಹಳ್ಳಿ ಸೇರಿದಂತೆ ನಗರದ ವಿವಿಧೆಡೆ ಯಡಿಯೂರಪ್ಪನವರು ಖುದ್ದಾಗಿ ಭೇಟಿ ನೀಡಿ ಪರೀಶೀಲನೆ ನಡೆಸಲಿದ್ದಾರೆ. ಆ ಬಳಿಕ ವಿಧಾನಸೌಧದಲ್ಲಿ ನಗರದ ಎಲ್ಲ ಶಾಸಕರು ಮತ್ತು ಸಂಸದರ ಸಭೆ ಕರೆದು ಚರ್ಚಿಸಲಿದ್ದಾರೆ.
ನಗರದಲ್ಲಿ ಮಳೆಯಿಂದಾಗಿ ಆಗಿರುವ ಹಾನಿಯ ಕುರಿತು ಸಚಿವರಾದ ಆರ್. ಅಶೋಕ್ ಹಾಗೂ ಸುರೇಶ್ ಕುಮಾರ್ ಅವರುಗಳು ಈಗಾಗಲೇ ವರದಿ ಸಿದ್ದಪಡಿಸಿದ್ದು, ಇಂದು ನಡೆಯುವ ಸಭೆಯಲ್ಲಿ ಮಂಡಿಸಲಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಉದ್ಯಾನನಗರಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ, ರಸ್ತೆಗಳ ಮೇಲೆ ಮರಗಳು ಉರುಳಿ ಅನೇಕ ವಾಹನಗಳು ಜಖಂಗೊಂಡಿದೆ ಹಾಗೂ ಮಳೆಯಿಂದಾಗಿ ಮನೆಗಳ ಮೇಲ್ಚಾವಣಿ ಕುಸಿದು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
|