ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಸ್‍‌ವೈಗೆ ಠಾಕೂರ್ ಬುಲಾವ್  Search similar articles
ಬಹುಮತ ಸಾಬೀತು ಪಡಿಸಿದ ಬಳಿಕವಷ್ಟೇ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದಾಗಿ ಪಟ್ಟು ಹಿಡಿದಿದ್ದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ತಮ್ಮ ನಿಲುವು ಸಡಿಲಿಸಿದ್ದು. ಯಡಿಯೂರಪ್ಪನವರಿಗೆ ಕರೆ ನೀಡಿ ಬಿಕ್ಕಟ್ಟು ಪರಿಹಾರಕ್ಕೆ ಕೈ ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ರಾಜ್ಯಪಾಲರು ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಒಂದು ವಾರದೊಳಗೆ ಬಹುಮತ ಸಾಬೀತು ಪಡಿಸಬೇಕೆಂದು ರಾಜ್ಯಪಾಲರು ಸರ್ಕಾರಕ್ಕೆ ಈಗಾಗಲೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆ ಪ್ರಕಾರವಾಗಿ ಯಡಿಯೂರಪ್ಪ ಗುರುವಾರದೊಳಗೆ ಸದನದಲ್ಲಿ ಬಹುಮತ ಸಾಬೀತು ಮಾಡಬೇಕಿದೆ.

ಈ ಮಧ್ಯೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೂರು ದಿನಗಳ ಕಾಲ ವಿಶೇಷ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಮೊದಲ ಎರಡು ದಿನ ನೂತನ ಶಾಸಕರ ಪ್ರಮಾಣ ವಚನ ಹಾಗೂ ಸಭಾಧ್ಯಕ್ಷರ ಆಯ್ಕೆ ಮತ್ತು ಕೊನೆಯ ದಿನ ವಿಶ್ವಾಸ ಮತಯಾಚನೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿತ್ತು.

ಆದರೆ ಇದೀಗ ಸರ್ಕಾರ ಎರಡು ದಿನಗಳ ಕಾಲ ಅಧಿವೇಶನವನ್ನು ನಡೆಸಲು ತೀರ್ಮಾನಿಸಿದೆ. ಅಲ್ಲದೆ, ಅದರಲ್ಲಿ ವಿಶ್ವಾಸ ಮತಯಾಚನೆ ಕಾರ್ಯಸೂಚಿಯೇ ಇಲ್ಲ. ಆದ್ದರಿಂದ ಈಗ ಈ ವಿಚಾರ ಗೊಂದಲಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಒಟ್ಟಿನಲ್ಲಿ ಇಂದು ಯಡಿಯೂರಪ್ಪ ಹಾಗೂ ರಾಜ್ಯಪಾಲರ ಮಾತುಕತೆಯಲ್ಲಿ ಈ ವಿವಾದ ಅಂತ್ಯಕಾಣಲಿದೆ ಎಂದು ನೀರೀಕ್ಷಿಸಲಾಗುತ್ತಿದೆ.
ಮತ್ತಷ್ಟು
ಮಳೆ ಹಾನಿ ಪ್ರದೇಶಕ್ಕೆ ಬಿಎಸ್‌ವೈ ಭೇಟಿ
ಭ್ರಷ್ಟಾಚಾರ ತಡೆಗೆ ಆದ್ಯತೆ: ಯಡಿಯೂರಪ್ಪ
ಸಿಇಟಿ ಕೌನ್ಸಿಲಿಂಗ್‌ಗೆ ಚಾಲನೆ
ಪದವೀಧರ ಕ್ಷೇತ್ರಕ್ಕೆ ಜೂ.26ಕ್ಕೆ ಚುನಾವಣೆ
ಯಡಿಯೂರ್-ಅನಂತ್ ಕುತಂತ್ರ: ಶೆಟ್ಟರ್
ಅಸಂತೃಪ್ತ 'ಸಿದ್ದು' ಕೈ ಬಿಡುತ್ತಾರಾ?