ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಂಟಿ ಅಧಿವೇಶನ ಭಾಷಣ: ಠಾಕೂರ್ ಸಮ್ಮತಿ  Search similar articles
PTI
ವಿಧಾನಸಭಾ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ನಿರಾಕರಿಸಿರುವ ರಾಜ್ಯಪಾಲರನ್ನು ಮನವೊಲಿಸುವಲ್ಲಿ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಇದೇ ತಿಂಗಳ ಆರರಂದು ವಿಧಾನಸಭಾ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಲ್ಲದೆ, ಅದೇ ದಿನದಂದು ಯಡಿಯೂರಪ್ಪನವರು ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಈ ಮೂಲಕ ಕಳೆದ ಎರಡು ದಿನಗಳಿಂದ ಉಂಟಾಗಿದ್ದ ವಿವಾದ ಸೌಹಾರ್ದಯುತವಾಗಿ ಬಗೆಹರಿದಂತಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಸುರೇಶ್ ಕುಮಾರ್, ಯಡಿಯೂರಪ್ಪನವರು ಇಂದು ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ಭಾಷಣ ಮಾಡುವಂತೆ ಮನವಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ರಾಜ್ಯಪಾಲರು ಯಡಿಯೂರಪ್ಪನವರಿಗೆ ಸದನವನ್ನುದ್ದೇಶಿಸಿ ಭಾಷಣ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮತ್ತಷ್ಟು
ಸ್ಪೀಕರ್ ಸ್ಥಾನಕ್ಕೆ ಶಿರ ಭಾಗಿದ ಶೆಟ್ಟರ್
ಬಿಎಸ್‍‌ವೈಗೆ ಠಾಕೂರ್ ಬುಲಾವ್
ಮಳೆ ಹಾನಿ ಪ್ರದೇಶಕ್ಕೆ ಬಿಎಸ್‌ವೈ ಭೇಟಿ
ಭ್ರಷ್ಟಾಚಾರ ತಡೆಗೆ ಆದ್ಯತೆ: ಯಡಿಯೂರಪ್ಪ
ಸಿಇಟಿ ಕೌನ್ಸಿಲಿಂಗ್‌ಗೆ ಚಾಲನೆ
ಪದವೀಧರ ಕ್ಷೇತ್ರಕ್ಕೆ ಜೂ.26ಕ್ಕೆ ಚುನಾವಣೆ