ಮಹಿಳಾ ಉದ್ಯೋಗಿಯೊಬ್ಬರ ಮೇಲೆ ಹಾಡುಹಗಲೆ ಮಾರಾಣಾಂತಿಕ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ನಗರದ ರಾಜಾಜಿನಗರ ಡಾ. ರಾಜ್‌ಕುಮಾರ್ ರಸ್ತೆಯ ಆದಿತ್ಯ ಗ್ರಾನೈಟ್ ಅಂಗಡಿಯಲ್ಲಿ ಮಂಗಳವಾರ ನಡೆದಿದೆ.
ಪ್ರಸನ್ನ ಲಕ್ಷ್ಮಿ ಎಂಬ ಮಹಿಳೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ ದುಷ್ಕರ್ಮಿ ಆಕೆಯ ಮೂಗು ಕತ್ತರಿಸಿದ್ದಾನೆ. ಮಹಿಳೆಯ ಕೊಲೆಗೆ ಯತ್ನ ನಡೆಸಿರುವ ಹರ್ಷವರ್ಧನ್ ಎಂಬಾತನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಈ ಘಟನೆಯಿಂದ ಗಂಭೀರ ಗಾಯಗೊಂಡಿರುವ ಲಕ್ಷ್ಮೀ ಅವರನ್ನು ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಆರೋಪಿ ಹರ್ಷವರ್ಧನ್ ಕೆಜಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಈ ದ್ವೇಷದಿಂದ ಆರೋಪಿ ಹರ್ಷವರ್ಧನ ಇಂದು ಬೆಳಿಗ್ಗೆ ಸುಮಾರು 11 ಗಂಟೆಯಲ್ಲಿ ಏಕಾಏಕಿ ಆಕೆಯ ಮೇಲೆ ಧಾಳಿ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಅಂಗಡಿಯಲ್ಲಿದ್ದ ಇತರೆ ನೌಕರರು ಹರ್ಷವರ್ಧನ್‌ಗೆ ಚೆನ್ನಾಗಿ ಥಳಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹರ್ಷವರ್ಧನ್ ವಿರುದ್ದ ಕೊಲೆ ಯತ್ನ ಆರೋಪ ದಾಖಲಿಸಿದ್ದಾರೆ.
|