ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರಿಗೆ ಉಚಿತ ವಿದ್ಯುತ್‌ಗೆ ಏನಡ್ಡಿ?  Search similar articles
ಭ್ರಷ್ಟಾಚಾರದ ವಿರುದ್ಧ ಸಮರ ಸಾರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿರುವುದನ್ನು ಜೆಡಿಎಸ್ ನಾಯಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಸ್ವಾಗತಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೂತನ ಸರಕಾರ ಪ್ರಾಮಾಣಿಕವಾಗಿ ಆಡಳಿತ ನಡೆಸಲಿ. ಭ್ರಷ್ಟಾಚಾರದ ತನಿಖೆಯನ್ನು ಕೈಗೊಂಡು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಿದಲ್ಲಿ ಅದು ಸ್ವಾಗತಾರ್ಹ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಪ್ರಸ್ತಾಪಿಸಿದ ಅವರು, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದರು, ಆದರೆ 48 ಗಂಟೆಗಳಾದರೂ ರೈತರಿಗೆ ಉಚಿತ ವಿದ್ಯುತ್ ನೀಡಿಲ್ಲ. ಅದಕ್ಕೆ ಬಹುಶಃ ಅಮಾವಾಸ್ಯೆ ಅಡ್ಡಿಯಾಗಿರಬಹುದು ಎಂದು ಲೇವಡಿ ಮಾಡಿದರು.

ಇದೇ ಸಂದರ್ಭದಲ್ಲಿ ಅಶೋಕ್ ಖೇಣಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಖೇಣಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಟೆರೆರಿಸ್ಟ್ ಇದ್ದ ಹಾಗೆ. ತಮ್ಮ ಕುಟುಂಬದ ಮೇಲೆ ಸಮರ ಸಾರಿದ್ದಾಗಿ ಹೇಳಿರುವ ಖೇಣಿಗೆ ಏನೂ ಮಾಡಲಾಗುವುದಿಲ್ಲ ಎಂದು ನುಡಿದರು.
ಮತ್ತಷ್ಟು
ರಸಗೊಬ್ಬರ ಅಭಾವಕ್ಕೆ ಕೇಂದ್ರ ಕಾರಣ: ಸಿಎಂ
ಹಾಡುಹಗಲೇ ಮಹಿಳಾ ಉದ್ಯೋಗಿ ಕೊಲೆ ಯತ್ನ
ಕರುಣಾಕರ ರೆಡ್ಡಿ ಸಂಸತ್ ಸ್ಥಾನಕ್ಕೆ ರಾಜೀನಾಮೆ
ಮಳೆ ಹಾನಿ: ಸಚಿವ ಸಂಪುಟ ಸಭೆ
ಜಂಟಿ ಅಧಿವೇಶನ ಭಾಷಣ: ಠಾಕೂರ್ ಸಮ್ಮತಿ
ಸ್ಪೀಕರ್ ಸ್ಥಾನಕ್ಕೆ ಶಿರ ಭಾಗಿದ ಶೆಟ್ಟರ್