ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಪತಿ ಆಡಳಿತಕ್ಕೆ ಅಧಿಕೃತ ತೆರೆ  Search similar articles
ಬಿಜೆಪಿ ನೇತೃತ್ವದ ಚೊಚ್ಚಲ ಸರ್ಕಾರದ ಮೊದಲ ಅಧಿವೇಶನ ಸಾರಾಗವಾಗಿ ನಡೆಯಿತು. ಮೊದಲ ಬಾರಿಗೆ ವಿಧಾನಸಭೆಗೆ ಆಗಮಿಸಿದ ಶಾಸಕರ ಮುಖದಲ್ಲಿ ಹೊಸ ಕಳೆ ಕಂಡು ಬಂದಿತ್ತು.

ಕಳೆದ 7ತಿಂಗಳ ರಾಷ್ಟ್ರಪತಿ ಆಡಳಿತಕ್ಕೆ ಇಂದು ತೆರೆಬಿದ್ದು, ಕಳೆಗೆಟ್ಟಿದ ವಿಧಾನಸೌಧದಲ್ಲಿ ಇಂದು ಸಂಭ್ರಮದ ವಾತಾವರಣ ಕಂಡು ಬಂದಿತ್ತು. ಎಪ್ಪತ್ತಾರು ವರ್ಷದ ಕಾಂಗ್ರೆಸ್ ಶಾಸಕ ಶ್ಯಾಮನೂರು ಶಿವಶಂಕರಪ್ಪ ಸದನಕ್ಕೆ ಹಳಬರಾದರೆ, ಕಂಪ್ಲಿ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವ 26ರ ಹರೆಯದ ಸುರೇಶ್ ಬಾಬು ಅತ್ಯಂತ ಕಿರಿಯ ಸದಸ್ಯರು. ಅವರು ಇದೇ ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲು ಏರಿದ್ದಾರೆ.

ಒಂಭತ್ತು ಬಾರಿ ವಿಧಾನಸಭೆ ಪ್ರವೇಶಿಸಿರುವ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಳೆದ 37ವರ್ಷಗಳಿಂದ ವಿಧಾನಸಭೆಯನ್ನು ಪ್ರತಿನಿಧಿಸಿದ್ದಾರೆ. ತಮ್ಮ ಜೀವದ ಗೆಳೆಯ ಧರಂಸಿಂಗ್ ಅನುಪಸ್ಥಿತಿಯಿಂದ ಖರ್ಗೆ ಮುಖ ಸ್ವಲ್ಪ ಕಳೆಗುಂದಿತ್ತು.

ಉಳಿದಂತೆ ಬಹುತೇಕ ಎಲ್ಲಾ ಶಾಸಕರು ಪಕ್ಷ ಭೇದ ಮರೆತು ಕುಶಲೋಪರಿಯಲ್ಲಿ ತೊಡಗಿದ್ದರು. ಬಹುತೇಕ ಶಾಸಕರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಕೆಲವು ಶಾಸಕರು ಇಷ್ಟ ದೈವ, ತಮ್ಮ ನಾಯಕ ಹಾಗೂ ಕ್ಷೇತ್ರದ ಮತದಾರರ ಹೆಸರಿನಲ್ಲಿ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದು, ಗಮನ ಸೆಳೆದಿತ್ತು.
ಮತ್ತಷ್ಟು
ತೈಲ ಬೆಲೆ ಏರಿಕೆಗೆ ಯಡಿಯೂರ್ ಖಂಡನೆ
ಕಳ್ಳಭಟ್ಟಿ: ಭಟ್ಟಿ ಇಕ್ಬಾಲ್ ಬಂಧನ
ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧೆ ಇಲ್ಲ: ಖರ್ಗೆ
ಸ್ಪೀಕರ್ ಸ್ಥಾನಕ್ಕೆ ಜೆಡಿಎಸ್ ಸ್ಪರ್ಧೆ ಇಲ್ಲ
ಗೌಡ-ಕುಮಾರಸ್ವಾಮಿ-ಬಿಎಸ್‌ವೈ ಭೇಟಿ
ಶಾಸಕರ ಪ್ರಮಾಣ ವಚನ ಸ್ವೀಕಾರ