ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾರಿಗೆ ಸಂಸ್ಥೆ ಬಸ್‌ದರ ಹೆಚ್ಚಳ  Search similar articles
ದೇಶದ್ಯಾಂತ ಹೆಚ್ಚಿಸಿರುವ ತೈಲ ಬೆಲೆ ಏರಿಕೆಯ ಪರಿಣಾಮದಿಂದಾಗಿ ರಾಜ್ಯದಲ್ಲೂ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಪ್ರಯಾಣ ದರ ತುಟ್ಟಿಯಾಗುವ ಸಂಭವವಿದೆ.

ಈ ಬಗ್ಗೆ ತಿಳಿಸಿರುವ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎ.ಪಿ. ಜೋಶಿ, ಪ್ರತಿದಿನ ಕೆಎಸ್ಆರ್ಟಿಸಿ ಬಸ್‌ಗಳು 20ಲಕ್ಷ ಕಿ.ಮೀ.ನಷ್ಟು ಸಂಚರಿಸುತ್ತವೆ. ಹೀಗಾಗಿ ಪ್ರತಿದಿನ 4 ಲಕ್ಷ ಲೀಟರ್ ಡೀಸಲ್ ವ್ಯಯವಾಗುತ್ತದೆ. ಪ್ರತಿ ಲೀಟರ್ ದರ 3ರೂ. ಹೆಚ್ಚಾದರೆ ವಾರ್ಷಿಕ 85 ಕೋಟಿ ರೂ. ನಷ್ಟ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶೀಘ್ರವೇ ಪ್ರಯಾಣ ದರ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.

ಅಲ್ಲದೆ, ಬಿಎಂಟಿಸಿ ದರವೂ ಹೆಚ್ಚಾಗುವ ಸಂಭವ ಕಂಡು ಬಂದಿದ್ದು, ತೈಲ ಏರಿಕೆಯಿಂದಾಗಿ ಬೆಲೆ ಹೆಚ್ಚಳ ಅನಿವಾರ್ಯ ಎಂದು ಬಿಎಂಟಿಸಿ ತಿಳಿಸಿದೆ.

ಈ ಮಧ್ಯೆ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ತೈಲ ಏರಿಕೆ ಇದಾಗಿದೆ. ಇದರ ಜೊತೆಗೆ ಆಯಾ ರಾಜ್ಯದ ತೆರಿಗೆಯಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಬೆಲೆ ವ್ಯತ್ಯಾಸವಾಗುತ್ತದೆ. ಕರ್ನಾಟಕದಲ್ಲಿ ಪೆಟ್ರೋಲಿಯಂ ತೆರಿಗೆ ಬಹಳ ಹೆಚ್ಚು. ಬೆಂಗಳೂರಿನಲ್ಲಿ ಪೆಟ್ರೋಲ್ ದರ ದೇಶದಲ್ಲೇ ಅತಿ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ರೂ. 59.50 ಆಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಪೆಟ್ರೋಲಿಯಂ ತೆರಿಗೆ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಮತ್ತಷ್ಟು
ರಾಷ್ಟ್ರಪತಿ ಆಡಳಿತಕ್ಕೆ ಅಧಿಕೃತ ತೆರೆ
ತೈಲ ಬೆಲೆ ಏರಿಕೆಗೆ ಯಡಿಯೂರ್ ಖಂಡನೆ
ಕಳ್ಳಭಟ್ಟಿ: ಭಟ್ಟಿ ಇಕ್ಬಾಲ್ ಬಂಧನ
ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧೆ ಇಲ್ಲ: ಖರ್ಗೆ
ಸ್ಪೀಕರ್ ಸ್ಥಾನಕ್ಕೆ ಜೆಡಿಎಸ್ ಸ್ಪರ್ಧೆ ಇಲ್ಲ
ಗೌಡ-ಕುಮಾರಸ್ವಾಮಿ-ಬಿಎಸ್‌ವೈ ಭೇಟಿ