ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜುಲೈ 7 ರಿಂದ ಹೈಕೋರ್ಟ್ ಪೀಠ ಕಾರ್ಯಾರಂಭ  Search similar articles
ದಶಕಗಳ ಕಾಲ ನಿರಂತರವಾಗಿ ಹೋರಾಟ ನಡೆಸಿದ ಉತ್ತರ ಕರ್ನಾಟಕದ ಜನತೆಯ ಹೋರಾಟಕ್ಕೆ ಜುಲೈ ಏಳರಂದು ಅಂತಿಮ ವಿಜಯ. ಅಂದು ಬಹುದಿನಗಳ ಕನಸಾಗಿದ್ದ ಹೈಕೋರ್ಟ್ ಪೀಠಗಳು ಏಕಕಾಲಕ್ಕೆ ಹುಬ್ಬಳ್ಳಿ ಮತ್ತು ಗುಲ್ಬರ್ಗಾಗಳಲ್ಲಿ ಕಾರ್ಯಾರಂಭ ಮಾಡಲಿವೆ.

ರಾಜ್ಯ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆರ್.ಬಿ. ಬೂದಿಹಾಳ ಈ ಬಗ್ಗೆ ಅಧಿಸೂಚನೆ ಹೋರಡಿಸಿದ್ದಾರೆ. ಎರಡೂ ಸಂಚಾರಿ ಪೀಠಗಳು ಮುಂದಿನ ತಿಂಗಳ 7ರಂದು ಕಾರ್ಯರಂಭ ಮಾಡಲಿವೆ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬ ಕೂಗು ಕಳೆದ ಕೆಲವು ವರ್ಷಗಳಿಂದಲೂ ಕೇಳಿ ಬಂದಿತ್ತು. ಈ ನಿಟ್ಟಿನಲ್ಲಿ ಹಲವು ಪ್ರತಿಭಟನೆಗಳೂ, ಅಮರಣಾಂತ ಉಪವಾಸಗಳು ನಡೆದವು. ಉತ್ತರ ಕರ್ನಾಟಕದ ಜನತೆಯ ಹೋರಾಟಕ್ಕೆ ತಲೆ ಬಾಗಿದ ಸರಕಾರ 2005ರಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಅನುಮತಿ ನೀಡಿತ್ತು. ನಂತರ ಎರಡು ಸ್ಥಳಗಳಲ್ಲಿ ಪ್ರಾರಂಭವಾದ ಕಟ್ಟಡ ಕಾಮಗಾರಿ ಇದೀಗ ಮುಕ್ತಾಯದ ಹಂತವನ್ನು ತಲುಪಿದ್ದು. ಜುಲೈ ಏಳರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ.

ಬಳಿಕ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಈ ಎರಡೂ ಸಂಚಾರಿ ಪೀಠಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿತು. ಇದೀಗ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಪೀಠ ಕಾರ್ಯಾರಂಭಕ್ಕೆ ಅಧಿಸೂಚನೆ ಪ್ರಕಟವಾಗಿದೆ.
ಮತ್ತಷ್ಟು
ವಿಧಾನಪರಿಷತ್ ಅಭ್ಯರ್ಥಿಗಳ ಘೋಷಣೆ
ಸಾರಿಗೆ ಸಂಸ್ಥೆ ಬಸ್‌ದರ ಹೆಚ್ಚಳ
ರಾಷ್ಟ್ರಪತಿ ಆಡಳಿತಕ್ಕೆ ಅಧಿಕೃತ ತೆರೆ
ತೈಲ ಬೆಲೆ ಏರಿಕೆಗೆ ಯಡಿಯೂರ್ ಖಂಡನೆ
ಕಳ್ಳಭಟ್ಟಿ: ಭಟ್ಟಿ ಇಕ್ಬಾಲ್ ಬಂಧನ
ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧೆ ಇಲ್ಲ: ಖರ್ಗೆ