ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಸ್ ಉರುಳಿ ಆರು ಪ್ರಯಾಣಿಕರ ಸಾವು  Search similar articles
ಚಿತ್ರದುರ್ಗ: ಹಾಸನದ ಅರಕಲಗೂಡಿನಲ್ಲಿ ಬಸ್ ಅಪಘಾತದಿಂದಾದ ಅನಾಹುತ ಇನ್ನು ಹಸಿರಾಗಿರುವಾಗಲೇ ಇನ್ನೊಂದು ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಖಾಸಗಿ ಬಸ್ಸೊಂದು ಉರುಳಿ ಬಿದ್ದು, ಸ್ಥಳದಲ್ಲಿಯೇ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನಾಯಕನಹಟ್ಟಿಯ ಮೇದೆಕ್ರಾಸ್ ಬಳಿ ಇಂದು(ಗುರುವಾರ) ಮಧ್ಯಾಹ್ನದ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಕ್ರೇನ್ ಮೂಲಕ ಬಸ್ ಎತ್ತುವ ಕಾರ್ಯ ನಡೆಸಲಾಗಿದ್ದು, ಸಾವಿನ ಶಂಕೆ ಹೆಚ್ಚುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿದ್ದು, ಚಾಲಕನ ಬೇಜಾವಾಬ್ದಾರಿಯೇ ಈ ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.
ಮತ್ತಷ್ಟು
ಬಂಗಾರಪ್ಪ, ಸಿಎಂ ಸೌಹಾರ್ದ ಭೇಟಿ
ಬಸ್ ದರ ಏರಿಕೆಯಿಲ್ಲ, ತೆರಿಗೆ ಕಡಿತಕ್ಕೆ ನಿರ್ಧಾರ
ಸುಬ್ರಮಣ್ಯ ನಾಯ್ಡುಗೆ ಸಚಿವ ಪದವಿ
ಉಪಸಭಾಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ನೀಡಿ: ಖರ್ಗೆ
ಸ್ಪೀಕರ್ ಆಗಿ ಶೆಟ್ಟರ್ ಅವಿರೋಧ ಆಯ್ಕೆ
ಜುಲೈ 7 ರಿಂದ ಹೈಕೋರ್ಟ್ ಪೀಠ ಕಾರ್ಯಾರಂಭ