ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ  Search similar articles
ಬೆಂಗಳೂರು: ಪೆಟ್ರೊಲ್, ಡೀಸೆಲ್ ಹಾಗೂ ಅಡುಗೆ ಅನಿಲಗಳ ಬೆಲೆಯನ್ನು ತೀವ್ರವಾಗಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು (ಗುರುವಾರ) ವಿವಿಧ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ.

ಸಂಸದ ಅನಂತ್‌ಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅನಂತ್‌ಕುಮಾರ್, ತೈಲ ಬೆಲೆ ಏರಿಕೆಗೆ ಯುಪಿಎ ಸರ್ಕಾರ ಸಂಪೂರ್ಣ ಹೊಣೆಯಾಗಿದೆ. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಹಲವು ಬಾರಿ ಇಂತಹ ಸಂದರ್ಭಗಳು ಒದಗಿದಾಗ ಸೂಕ್ತ ಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದರು.

ನಗರದಲ್ಲಿ ಮಾತ್ರವಲ್ಲದೆ, ಆನೇಕಲ್, ಗುಲ್ಬರ್ಗಾ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶೀಘ್ರವೇ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನಗರದ ಟೌನ್‌ಹಾಲ್‌ನಲ್ಲಿ ಇಂದು ನಡೆಸಲಾದ ಪ್ರತಿಭಟನೆಯಲ್ಲಿ ನೂರಾರು ಮಂದಿ ಯುಪಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಲವೆಡೆ ರಸ್ತೆ ತಡೆ ನಡೆಸಿರುವ ಕುರಿತು ವರದಿ ಬಂದಿದೆ.
ಮತ್ತಷ್ಟು
ಬಸ್ ಉರುಳಿ ಆರು ಪ್ರಯಾಣಿಕರ ಸಾವು
ಬಂಗಾರಪ್ಪ, ಸಿಎಂ ಸೌಹಾರ್ದ ಭೇಟಿ
ಬಸ್ ದರ ಏರಿಕೆಯಿಲ್ಲ, ತೆರಿಗೆ ಕಡಿತಕ್ಕೆ ನಿರ್ಧಾರ
ಸುಬ್ರಮಣ್ಯ ನಾಯ್ಡುಗೆ ಸಚಿವ ಪದವಿ
ಉಪಸಭಾಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ನೀಡಿ: ಖರ್ಗೆ
ಸ್ಪೀಕರ್ ಆಗಿ ಶೆಟ್ಟರ್ ಅವಿರೋಧ ಆಯ್ಕೆ