ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ : ಮುಂದುವರಿದ ರೈತರ ಪ್ರತಿಭಟನೆ  Search similar articles
ಸಮರ್ಪಕವಾಗಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಪೂರೈಕೆಯಾಗದಿರುವ ಬಗ್ಗೆ ಆಕ್ರೋಶಗೊಂಡಿರುವ ರೈತರು ಉಗ್ರ ಪ್ರತಿಭಟನೆ ನಡೆಸಿದ್ದಾರೆ.

ದಾವಣಗೆರೆಗೆ ಮಾತ್ರ ಸೀಮಿತವಾಗಿದ್ದ ಪ್ರತಿಭಟನೆ ಹಾಸನ, ಚಿಕ್ಕಮಗಳೂರು, ಧಾರವಾಡಗಳಲ್ಲಿಯೂ ಕಂಡು ಬಂದಿದೆ. ಹಾಸನದಲ್ಲಿ ಪ್ರತಿಭಟನಾನಿರತ ರೈತರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಧಿಕಾರಿಗಳಿಗೆ ವಿಷದ ಬಾಟಲಿಗಳನ್ನು ನೀಡಿ ರಸಗೊಬ್ಬರ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಕ್ರಿಮಿನಶಕ ಸೇವಿಸಿ ಆತ್ಯಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದರು.

ರೈತ ಸಂಘ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಾರೆ. ರೈತರ ಪ್ರತಿಭಟನೆಗೆ ಸರ್ಕಾರ ಯಾವುದೇ ಬೆಲೆ ನೀಡದಿರುವುದರಿಂದ ಪ್ರತಿಭಟನಾಕಾರರು ನಾಳೆ ದಾವಣಗೆರೆ ಬಂದ್‌ಗೆ ಕರೆ ನೀಡಿದ್ದಾರೆ.

ಈ ಮಧ್ಯೆ ಪ್ರಧಾನಿ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದ ರಸಗೊಬ್ಬರ ಸಮಸ್ಯೆ ಪರೀಶೀಲನೆಗೆ ನಾಳೆ ನಗರಕ್ಕೆ ಕೇಂದ್ರ ರಸಗೊಬ್ಬರ ಇಲಾಖೆ ಕಾರ್ಯದರ್ಶಿಗಳು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಬಿಎಸ್‌ವೈ ವಿಶ್ವಾಸಮತ ಕೋರಿಕೆ, ಖಾತೆ ಹಂಚಿಕೆ
ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ
ಬಸ್ ಉರುಳಿ ಆರು ಪ್ರಯಾಣಿಕರ ಸಾವು
ಬಂಗಾರಪ್ಪ, ಸಿಎಂ ಸೌಹಾರ್ದ ಭೇಟಿ
ಬಸ್ ದರ ಏರಿಕೆಯಿಲ್ಲ, ತೆರಿಗೆ ಕಡಿತಕ್ಕೆ ನಿರ್ಧಾರ
ಸುಬ್ರಮಣ್ಯ ನಾಯ್ಡುಗೆ ಸಚಿವ ಪದವಿ