ಕೇಂದ್ರದ ಯುಪಿಎ ಸರ್ಕಾರ ಇಂಧನ ಬೆಲೆಯನ್ನು ಏಕಾಏಕಿ ಶೇ.10ರಷ್ಟು ಏರಿಸಿರುವುದು ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣದುಬ್ಬರ ಈ ದಶಕದ ದಾಖಲೆಯನ್ನು ದಾಟಿ ಜನ ಸಾಮಾನ್ಯರ ಮೇಲೆ ಹೊರೆ ಬಿದ್ದಿರುವಾಗ ಇಂಧನ ಬೆಲೆಯನ್ನು ಸಹ ಏರಿಕೆ ಮಾಡಿರುವುದು ಆತಂಕದ ಸಂಗತಿಯಾಗಿದೆ ಎಂದು ಹೇಳಿಕೆಯಲ್ಲಿ ಅವರು ಕೇಂದ್ರ ಸರ್ಕಾರವನ್ನು ಖಂಡಿಸಿದ್ದಾರೆ.
ಆರ್ಥಿಕ ತಜ್ಞರಾಗಿರುವ ದೇಶದ ಪ್ರಧಾನಿಗಳಿಗೇ ಗಗನಕ್ಕೆರುತ್ತಿರುವ ಬೆಲೆಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದಾದರೇ ಇದೊಂದು ದೇಶದ ಆರ್ಥಿಕ ದುಸ್ಥಿತಿ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಕೇಂದ್ರದ ಮೇಲೆ ಬೀಳುತ್ತಿರುವ ಹೊರೆಯನ್ನು ತಗ್ಗಿಸಿಕೊಳ್ಳುವ ಕುರಿತು ಚರ್ಚೆ ನಡೆಸಿ ತೀರ್ಮಾನಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
|