ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದನೆ ನಿಗ್ರಹಕ್ಕೆ ಪ್ರಾಶಸ್ತ್ಯ: ಠಾಕೂರ್  Search similar articles
ರಾಜ್ಯದಲ್ಲಿ ವಿಸ್ತರಿಸುತ್ತಿರುವ ಭಯೋತ್ಪಾದನೆ ನಿಗ್ರಹ, ಉತ್ತರ ಕರ್ನಾಟಕದ ಅಭಿವೃದ್ದಿಗೆ ನಂಜುಂಡಪ್ಪ ವರದಿ ಅನುಷ್ಟಾನ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೈಗೆತ್ತಿಕೊಳ್ಳಲಾಗಿರುವ ಕಳಾಸ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸರಕಾರ ಬದ್ಧವಾಗಿದೆ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಜಂಟಿ ಅಧಿವೇಶನದಲ್ಲಿ ಹೇಳಿದ್ದಾರೆ.

ಬೆಂಗಳೂರು: ಹದಿಮೂರನೆ ವಿಧಾನ ಸಭೆಯ ಮೊದಲ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಅಸ್ತಿತ್ವಕ್ಕೆ ಬಂದಿರುವ ನೂತನ ಸರಕಾರ ಮುಂಬರುವ ದಿನಗಳಲ್ಲಿ ರಾಜ್ಯದ ಅಭಿವೃದ್ದಿ ಮತ್ತು ಸುರಕ್ಷತೆಗೆ ಕುರಿತಂತೆ ಅನುಸರಿಸಲಿರುವ ನೀತಿಯನ್ನು ವಿಧಾನ ಪರಿಷತ್ ಮತ್ತು ವಿಧಾನ ಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

ನೂತನ ಸರ್ಕಾರದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ ಅವರು ರಾಜ್ಯದ ಏಳಿಗೆಗೆ ಕೈಗೆತ್ತಿಕೊಳ್ಳಲಾಗುತ್ತಿರುವ ಯೋಜನೆಗಳ ಕುರಿತು ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಮಾತನಾಡಿದರು,

ಕೆರೆಗಳ ಅಭಿವೃದ್ದಿಗೆ ಸೂಕ್ತ ಕ್ರಮ ಜಾರಿಗೆ ಬರಲಿದೆ ಎಂದು ತಿಳಿಸಿದ ಅವರು. ಕೆರೆ ನೀರು ಸಂಗ್ರಹಕ್ಕೆ ಸರ್ಕಾರ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ತಮ್ಮ ಭಾಷಣದಲ್ಲಿ ಕನ್ನಡ ಶಾಸ್ತ್ತ್ರೀಯ ಸ್ಥಾನಮಾನ ನೀಡುವ ಬಗ್ಗೆ ಮಾತನಾಡಿದ ಅವರು ಕನ್ನಡ ಶಾಸ್ತ್ತ್ರೀಯ ಸ್ಥಾನಮಾನಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.

ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು:
• ಎಲ್ಲಾ ಸಮುದಾಯಗಳಿಗೂ ಶಾಂತಿ ಕಾಪಾಡಲು ಕ್ರಮ • ಸ್ತ್ತ್ರೀ ಸಶಕ್ತಿಕರಣಕ್ಕೆ ಒತ್ತು • ಆಸ್ತಿ ತೆರಿಗೆ ಸಂಬಂಧಕ್ಕೆ ಪುನರ್ ವಿಮರ್ಶೆ • ಹೆಣ್ಣು ಮಕ್ಕಳಿಗೆ ಪದವಿಯವರೆಗೆ ಉಚಿತ ಶಿಕ್ಷಣ • ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಕ್ರಮ
• ತಾಲೂಕು ಕೇಂದ್ರಗಳಲ್ಲಿ ಸ್ತ್ತ್ರೀಶಕ್ತಿ ಭವನ ನಿರ್ಮಾಣ • ರಾಜ್ಯದ ಅಭಿವೃದ್ದಿಗೆ ಒತ್ತು• ಖಾಸಗಿ ಪಾಲುದಾರಿಕೆಯಲ್ಲಿ ರಸ್ತೆ ನಿರ್ಮಾಣ • 5ವರ್ಷದಲ್ಲಿ ಎಲ್ಲಾ ವಸತಿ ಹೀನರಿಗೆ ವಸತಿ ಸೌಲಭ್ಯ• ಮೀನುಗಾರಿಕೆ ಉದ್ಯಮಕ್ಕೆ ಒತ್ತು • ಸಹಕಾರಿ ಕ್ಷೇತ್ರಗಳ ಬಲವೃದ್ದಿಗೆ ಒತ್ತು • ನಗರಗಳ ಅಭಿವೃದ್ದಿಗಳಿಗೆ ಯೋಜನೆ.
ಮತ್ತಷ್ಟು
ತೈಲೆ ಬೆಲೆ ಏರಿಕೆ: ಕಿಡಿ ಕಾರಿದ ಮಾಜಿ ಪ್ರಧಾನಿ
ರಸಗೊಬ್ಬರ : ಮುಂದುವರಿದ ರೈತರ ಪ್ರತಿಭಟನೆ
ಬಿಎಸ್‌ವೈ ವಿಶ್ವಾಸಮತ ಕೋರಿಕೆ, ಖಾತೆ ಹಂಚಿಕೆ
ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ
ಬಸ್ ಉರುಳಿ ಆರು ಪ್ರಯಾಣಿಕರ ಸಾವು
ಬಂಗಾರಪ್ಪ, ಸಿಎಂ ಸೌಹಾರ್ದ ಭೇಟಿ