ಬೆಂಗಳೂರು: ಖೋಟಾ ನೋಟು ಮುದ್ರಣ ಘಟಕವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 9 ಮಂದಿಯನ್ನು ಬಂದಿಸಿದ್ದು, 1ಕೋಟಿ ರೂ. ಬೆಲೆಯ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಶೇಷಾದ್ರಿಪುರಂ ಪ್ಲಾಟ್ ಫಾರಂ ರಸ್ತೆಯಲ್ಲಿರುವ ಮಿರಾಕಲ್ ಗ್ರಾಫಿಕ್ಸ್ ಪ್ರೆಸ್ ಮೇಲೆ ಧಾಳಿ ನಡೆಸಿದ ಸಿಸಿಬಿ ಪೊಲೀಸರು 100 ಹಾಗೂ 50 ರೂ. ಮುಖಬೆಲೆಯ ಸುಮಾರು 39300ರೂ.ಗಳ ಖೊಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ಎನ್. ಅಚ್ಯುತ್ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವ್ಯಾಪಾರದಲ್ಲಿ ಆದ ನಷ್ಟ ಸರಿಪಡಿಸಿಕೊಳ್ಳಲು ಶಿವಶಂಕರ್, ನಾಗೇಂದ್ರ ಪ್ರಸಾದ್, ನರಸಿಂಹ ಮೂರ್ತಿ ಅವರು ಖೋಟಾನೋಟು ಮುದ್ರಣ ವ್ಯವಹಾರಕ್ಕೆ ಇಳಿದಿದ್ದರು. ಇವರೊಂದಿಗೆ ಉಳಿದ ಆರು ಮಂದಿ ಜೊತೆಗೂಡಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ಮುದ್ರಿಸಿರುವ ಖೊಟಾನೋಟುಗಳನ್ನು ಆರೋಪಿಗಳು ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಚಲಾವಣೆ ಮಾಡಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ.
|