ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಗೆ ಧ್ವನಿಮತ, 23ರಿಂದ ಅಧಿವೇಶನ  Search similar articles
ಸದನದಲ್ಲಿ ಶುಕ್ರವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಿಜೆಪಿ ಸರಕಾರ ಬಹುಮತ ಸಾಬೀತು ಪಡಿಸಿದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಆಡಳಿತದ ಶಕೆ ಅಧಿಕೃತ ಆರಂಭಗೊಂಡಂತಾಯಿತು.

ಧ್ವನಿಮತದ ಮೂಲಕ ವಿಶ್ವಾಸಮತ ಅಂಗೀಕಾರವಾಗಿದ್ದು, ಆಡಳಿತ ನಡೆಸಲು ಬಿಜೆಪಿಗೆ ಸಂಪೂರ್ಣ ಅಧಿಕಾರ ಸಿಕ್ಕಾಂತಾಗಿದೆ. ರಾಜ್ಯಪಾಲರ ಭಾಷಣದ ಬಳಿಕ ಮತ್ತೆ ಅಧಿವೇಶನ ಪ್ರಾರಂಭಗೊಂಡ ಸಂದರ್ಭದಲ್ಲಿ ಮೊದಲು ಗೊತ್ತುವಳಿ ಮೇಲಿನ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷ ಪಟ್ಟು ಹಿಡಿದಾಗ ಸ್ಪೀಕರ್ ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರು ನೂತನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ತೈಲ ಬೆಲೆ ಏರಿಕೆ ಹಾಗೂ ರಸಗೊಬ್ಬರಗಳ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು. ಅಂತೆಯೇ ಪ್ರಣಾಳಿಕೆ ಅಂಶಗಳನ್ನು ಪಾಲಿಸದೆ ರೈತ ವಿರೋಧಿ ಚಟುವಟಿಕೆಗಳಿಗೆ ಬಿಜೆಪಿ ತೊಡಗಿದೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದರು.

ಪ್ರತಿಪಕ್ಷಗಳ ಆರೋಪಕ್ಕೆ ಬಿಜೆಪಿ ನಾಯಕರು ಉತ್ತರ ನೀಡಿದರೂ ಸಮಧಾನಗೊಳ್ಳದ ವಿರೋಧ ಪಕ್ಷದ ನಾಯಕ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸಭಾತ್ಯಾಗ ಮಾಡಿದರು. ಬಳಿಕ ಸ್ಪೀಕರ್ ಧ್ವನಿಮತದ ಮೂಲಕ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಿದರು. ಬಹುಮತ ಸಾಬೀತು ಬಳಿಕ ಸದನದ ಅಧಿವೇಶನವನ್ನು ಜೂನ್ 23ಕ್ಕೆ ಮುಂದೂಡಲಾಗಿದೆ.

ಕಳೆದ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಮಿತ್ರ ಪಕ್ಷವು ಮಾತಿಗೆ ತಪ್ಪಿದ ಹಿನ್ನೆಲೆಯಲ್ಲಿ ವಿಶ್ವಾಸ ಮತ ಯಾಚಿಸುವ ಮುನ್ನವೇ ರಾಜೀನಾಮೆ ನೀಡಿದ್ದು, ಬರಿಯ ಏಳುದಿನದ ಮುಖ್ಯಮಂತ್ರಿಯಾಗಿದ್ದರು. ಆದರೆ ಈ ಬಾರಿ ಸಂಪೂರ್ಣ ಬಹುಮತ ಸಾಬೀತು ಪಡಿಸುವ ಮೂಲಕ ಅವರ ಹಲವು ಕಾಲದ ಕನಸ್ಸು ನನಸಾಗಿದೆ.
ಮತ್ತಷ್ಟು
ರಸಗೊಬ್ಬರ ಕೊರತೆ ನೀಗಿಸುವಲ್ಲಿ ಸರ್ಕಾರ ವಿಫಲ
ತೈಲ ಸುಂಕ ಕಡಿತಕ್ಕೆ ಕಾಂಗ್ರೆಸ್ ಆಗ್ರಹ
ಖೋಟಾ ನೋಟು : 9 ಆರೋಪಿಗಳ ಬಂಧನ,
ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದ ವಿಪಕ್ಷ
ಭಯೋತ್ಪಾದನೆ ನಿಗ್ರಹಕ್ಕೆ ಪ್ರಾಶಸ್ತ್ಯ: ಠಾಕೂರ್
ತೈಲೆ ಬೆಲೆ ಏರಿಕೆ: ಕಿಡಿ ಕಾರಿದ ಮಾಜಿ ಪ್ರಧಾನಿ