ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಒಂದು ವಾರದ ಸಚಿವ ಸಂಪುಟವನ್ನು ಇಂದು ವಿಸ್ತರಿಸಲಿದ್ದು, ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಂಜೆ ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೇ 30ರಂದು ಮುಖ್ಯಮಂತ್ರಿ ಸೇರಿದಂತೆ 30 ಮಂದಿ ಸದಸ್ಯರ ಸಚಿವ ಸಂಪುಟವು ಅಸ್ತಿತ್ವಕ್ಕೆ ಬಂದಿತ್ತು. ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿರುವ ನಾಯ್ಡು. ಆ ದಿನ ನಗರದಲ್ಲಿಲ್ಲದ ಕಾರಣ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.
ಶುಕ್ರವಾರ ಯಡಿಯೂರಪ್ಪ ಸಂಪುಟವು ಧ್ವನಿ ಮತದಿಂದ ವಿಶ್ವಾಸಮತ ಗೆದ್ದುಕೊಂಡಿತ್ತು. ಇದೇ ವೇಳೆ, ಖಾತೆಗಳ ಹಂಚಿಕೆ ಬಗ್ಗೆ ತೀವ್ರ ಲಾಬಿ ನಡೆದಿದ್ದು, ಯಾರು ಯಾವ ಖಾತೆಗಳನ್ನು ಪಡೆಯುತ್ತಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಖಾತೆಗಳನ್ನು ಕೂಡ ಶೀಘ್ರವೇ ಹಂಚಿಕೆ ಮಾಡುವ ನಿರೀಕ್ಷೆ ಇದೆ.
|