ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೌಲ್ಯಮಾಪನ: ಉತ್ತರ ಪತ್ರಿಕೆ ಎಸೆದ ಅಧಿಕಾರಿಗಳು  Search similar articles
ಉತ್ತರ ಪತ್ರಿಕೆಯನ್ನು ಪಡೆಯಲು ವಿಳಂಬಗೊಳಿಸಿದ್ದರಿಂದ ಸಿಟ್ಟುಗೊಂಡ ಮಹಾರಾಣಿ ಕಾಲೇಜಿಗೆ ಬಂದ ವಿವಿಧ ಕಾಲೇಜುಗಳ ಅಧಿಕಾರಿಗಳು ಉತ್ತರ ಪತ್ರಿಕೆಯ ಬಂಡಲ್‌ಗಳನ್ನು ಕಾಲೇಜಿನ ಮುಂದೆ ಸುರಿದು ಪ್ರತಿಭಟನೆ ನಡೆಸಿದರು.

ನಗರದ 274 ಪರೀಕ್ಷಾ ಕೇಂದ್ರಗಳಲ್ಲಿ ಬಿ.ಕಾಂ. ಪದವಿ ಪರೀಕ್ಷೆ ನಡೆಯುತ್ತಿದ್ದು, ಅದರ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಕೇಂದ್ರವಾದ ಮಹಾರಾಣಿ ಕಾಲೇಜಿಗೆ ಶುಕ್ರವಾರ ಸಂಜೆ ಅಧಿಕಾರಿಗಳು ತಂದಿದ್ದರು. ಆದರೆ ಮೇಲ್ವಿಚಾರಣೆ ವಹಿಸಿದ್ದ ಅಧಿಕಾರಿ ಸಂಜೆ ನಾಲ್ಕು ಗಂಟೆಯಾದರೂ ಕಾಲೇಜಿಗೆ ಬರಲಿಲ್ಲ. ಇದರಿಂದ ಕಾದು ಸುಸ್ತಾದ ಸಿಬ್ಬಂದಿಗಳು ಉತ್ತರ ಪತ್ರಿಕೆಯನ್ನು ಕಾಲೇಜಿನ ಮುಂದೆ ಬಿಸಾಡಿ ಪ್ರತಿಭಟನೆಗಿಳಿದರು.

ನಂತರ ಘಟನಾ ಸ್ಥಳಕ್ಕೆ ಬಂದ ಮೌಲ್ಯಮಾಪನ ಕುಲಸಚಿವ ರಾಧಾಕೃಷ್ಣ, ಇನ್ನೂ ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ. ಕರ್ತವ್ಯಲೋಪ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು.
ಮತ್ತಷ್ಟು
ಹಣ ಬಲ ಪ್ರಾಬಲ್ಯದ ಬಿಜೆಪಿ ಸರ್ಕಾರ-ಖರ್ಗೆ
ಯಡಿಯೂರಪ್ಪ ಸಂಪುಟಕ್ಕೆ ಕಟ್ಟಾ ಸೇರ್ಪಡೆ ಇಂದು
ರಾಜ್ಯದಲ್ಲಿ ಮುಂದುವರಿದ ಪ್ರತಿಭಟನೆ
ಬಿಜೆಪಿಗೆ ಧ್ವನಿಮತ, 23ರಿಂದ ಅಧಿವೇಶನ
ರಸಗೊಬ್ಬರ ಕೊರತೆ ನೀಗಿಸುವಲ್ಲಿ ಸರ್ಕಾರ ವಿಫಲ
ತೈಲ ಸುಂಕ ಕಡಿತಕ್ಕೆ ಕಾಂಗ್ರೆಸ್ ಆಗ್ರಹ