ಜೆಪಿನಗರದ ವರ್ತುಲ ರಸ್ತೆ ಅಗಲಗೊಳಿಸುವ ಬಿಬಿಎಂಪಿ ನಿರ್ಧಾರದಿಂದ 15ನೇ ಮುಖ್ಯರಸ್ತೆಯಲ್ಲಿರುವ 44 ಕುಟುಂಬಗಳು ತಮ್ಮ ಆಸ್ತಿಯನ್ನು ಕಳೆದುಕೊಳ್ಳಲಿದೆ. ಇದರಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗೀರೀಶ್ ಕಾರ್ನಾಡ್, ನಟಿ ತಾರಾ, ಅರತಿ ಹಾಗೂ ಮಮತಾ ರಾವ್ ಅವರ ಮನೆಯೂ ಸೇರಿದೆ.
ಆದರೆ ರಸ್ತೆ ಅಗಲೀಕರಣದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎನ್ನುತ್ತಾರೆ ಗೀರೀಶ್ ಕಾರ್ನಾಡ್. ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ನಾಡ್, ಬಿಬಿಎಂಪಿ ಕಾಮಗಾರಿಯ ಬಗ್ಗೆ ನನಗೆ ಯಾವುದೇ ಸುಳಿವು ಸಿಕ್ಕಿಲ್ಲ. ಗುತ್ತಿಗೆದಾರರು ನನ್ನ ಜೊತೆ ತುಂಬಾ ಸ್ನೇಹಮಯವಾಗಿದ್ದಾರೆ. ಆದರೆ ರಸ್ತೆ ಅಗಲೀಕರಣದ ಸಮಯದಲ್ಲಿ ನನ್ನ ಮನೆಯ ಒಂದು ಗೋಡೆಯನ್ನು ಒಡೆಯಲಾಗುತ್ತದಂತೆ. ಇದು ನನಗೆ ತುಂಬಾ ಅಘಾತ ತಂದಿದೆ ಎಂದರು.
ಬಿಬಿಎಂಪಿ ಸಾರ್ವಜನಿಕರ ಒಳಿಗಾಗಿ ಈ ಕಾರ್ಯ ಮಾಡಲಾಗುತ್ತಿದೆ ಎನ್ನುತ್ತಿದೆ. ಆದರೆ ಇದರಿಂದ ನಮಗೆ ತೊಂದರೆ ಆಗುತ್ತದೆ. ಹಾಗಿದ್ದರೆ ನಾವು ಸಾರ್ವನಿಕಕರಲ್ಲವೇ? ಇದರಿಂದ ನನಗೆ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ನಷ್ಟವಾಗುತ್ತದೆ ಎಂದು ತಮ್ಮ ನೋವು ತೋಡಿಕೊಂಡರು ನಟಿ ತಾರಾ. ಹೀಗೆ ಇಲ್ಲಿನ ಅನೇಕ ನಿವಾಸಿಗಳು ತಮ್ಮ ಜಾಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
|