ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದರೋಡೆಗಿಳಿದ ಸಾಫ್ಟ್‌ವೇರ್ ಉದ್ಯೋಗಿಗಳು  Search similar articles
ಶ್ರೀಮಂತರನ್ನು ಬೆದರಿಸಿ ಅವರಿಂದ ಹಣ ದೋಚುತ್ತಿದ್ದ ಆರು ಮಂದಿ ಸಾಫ್ಟ್‌ವೇರ್ ಉದ್ಯೊಗಿಗಳನ್ನು ಪೊಲೀಸರು ಬಂಧಿಸಿದ್ದು ಅವರಿಂದ 4 ಲಕ್ಷ ರೂ. ನಗದು ಹಾಗೂ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಇವರು ಇಂಗ್ಲೀಷ್ ಚಿತ್ರ ಸ್ಪೀಡ್ ರೀತಿಯಲ್ಲಿ ತಮ್ಮ ದರೋಡೆ ಸಂಚು ರೂಪಿಸಿದ್ದರು. ಶ್ರೀಮಂತರನ್ನು ಗುರತಿಸಿ ಅವರ ಜೊತೆ ಉತ್ತಮವಾಗಿ ವರ್ತಿಸಿ ಡ್ರಾಪ್ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸುತ್ತಿದ್ದರು. ನಂತರ ಅವರಿಗೆ ಕಿಡ್ನಾಪ್, ಕೊಲೆ ಮಾಡುವ ಬೆದರಿಕೆ ಒಡ್ಡುವುದರ ಜೊತೆಗೆ ಸಣ್ಣ ಬ್ಯಾಟರಿ ಇರುವ ಯಂತ್ರವನ್ನು ಅವರ ಶರ್ಟಿನ ಹಿಂಭಾಗಕ್ಕೆ ಸಿಕ್ಕಿಸಿ, ಬಾಂಬ್ ಫಿಕ್ಸ್ ಮಾಡಲಾಗಿದೆ. ನೀವೇನಾದರೂ ಪೊಲೀಸರಿಗೆ ಅಥವಾ ಬೇರೆಯವರಿಗೆ ದೂರು ನೀಡಲು ಹೋದರೆ ಆ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ ಎಂದು ಹೆದರಿಸಿ ಹಣ ಕಸಿಯುತ್ತಿದ್ದರು.

ಇದೇ ರೀತಿ ಇಬ್ಬರನ್ನು ಬೆದರಿಸಿ ಹಣ ವಸೂಲಿ ಮಾಡಿದ್ದು, ಮೂರನೇಯವರಲ್ಲಿ ಇದೇ ರೀತಿ ಮಾಡುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೆಂಗೇರಿ ಹಾಗೂ ಕಲಾಸಿಪಾಳ್ಯ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಈ ರಹಸ್ಯವನ್ನು ಪತ್ತೆ ಹಚ್ಚಿದ್ದು ಇವರಿಂದ ನಾಲ್ಕು ಲಕ್ಷ ನಗದು, ಎರಡು ಕಾರು ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮತ್ತಷ್ಟು
ಅಗಲೀಕರಣ:ಪ್ರತಿಷ್ಠಿತರ ಕಟ್ಟಡಗಳಿಗೆ ಧಕ್ಕೆ
ಮೌಲ್ಯಮಾಪನ: ಉತ್ತರ ಪತ್ರಿಕೆ ಎಸೆದ ಅಧಿಕಾರಿಗಳು
ಹಣ ಬಲ ಪ್ರಾಬಲ್ಯದ ಬಿಜೆಪಿ ಸರ್ಕಾರ-ಖರ್ಗೆ
ಯಡಿಯೂರಪ್ಪ ಸಂಪುಟಕ್ಕೆ ಕಟ್ಟಾ ಸೇರ್ಪಡೆ ಇಂದು
ರಾಜ್ಯದಲ್ಲಿ ಮುಂದುವರಿದ ಪ್ರತಿಭಟನೆ
ಬಿಜೆಪಿಗೆ ಧ್ವನಿಮತ, 23ರಿಂದ ಅಧಿವೇಶನ