ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ಜೆಡಿಎಸ್ ತನ್ನ ಸೋಲಿನ ಪರಾಮರ್ಶೆಗೆ ಇಂದು(ಶನಿವಾರ) ಸಭೆ ನಡೆಸಿ ಚರ್ಚಿಸಿದರು. ಈ ಬಾರಿ ಜೆಡಿಎಸ್ ಕೇವಲ 28 ಸ್ಥಾನಗಳನ್ನು ಪಡೆದಿತ್ತು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್, ಡಿ. ಮಂಜುನಾಥ್ ಭಾಗವಹಿಸಿದ್ದರು. ಜೆಡಿಎಸ್ ಬೆಂಗಳೂರು ನಗರದಲ್ಲಿ ಹೀನಾಯ ಸೋಲು ಕಂಡಿತು.
ಅಭ್ಯರ್ಥಿಗಳಿಗೆ ಸರಿಯಾದ ಸಮಯದಲ್ಲಿ ಬಿ ಫಾರಂ ವಿತರಿಸುವಾಗಲೂ ವಿಳಂಬವಾಗಿದ್ದು, ಕುಮಾರಸ್ವಾಮಿಯವರನ್ನು ಹೊರತುಪಡಿಸಿದರೆ ಪ್ರಬಲವಾದ ಯಾವುದೇ ನಾಯಕರು ರಾಜ್ಯಾದ್ಯಂತ ಪ್ರಚಾರ ನಡೆಸಿರಲಿಲ್ಲ. ಇದರಿಂದಲೂ ಜೆಡಿಎಸ್ ಹಿನ್ನಡೆಗೆ ಕಾರಣವಾಯಿತು ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಯಾವ ರೀತಿ ಸಂಘಟಿತರಾಗಿ ಜಯಗಳಿಸುವಲ್ಲಿ ಶ್ರಮಿಸಬೇಕು ಎಂದು ತೀರ್ಮಾನಿಸಲಾಯಿತು.
|