ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾರಿ ಮಾಲೀಕರಿಂದ ಮುಷ್ಕರ ಬೆದರಿಕೆ  Search similar articles
ರಾಜ್ಯ ಸರಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಇಳಿಸದಿದ್ದರೆ ಜುಲೈ 1ರಿಂದ ಅನಿರ್ದಿಷ್ಟವಾಧಿ ಲಾರಿ ಮುಷ್ಕರ ನಡೆಸುವುದಾಗಿ ಕರ್ನಾಟಕ ಲಾರಿ ಮತ್ತು ಸರಕು ಸಾಗಾಣಿಕೆ ಒಕ್ಕೂಟ ಸರಕಾರವನ್ನು ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಲಾರಿ ಸಂಘದ ಅಧ್ಯಕ್ಷ ಷಣ್ಮುಗಂ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಕಡಿತಗೊಳಿಸುವ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗದಿದ್ದರೆ ಮುಷ್ಕರಕ್ಕೆ ಇಳಿಯುವುದಾಗಿ ತಿಳಿಸಿದರು.

ನೆರೆ ರಾಜ್ಯಗಳಿಗೆ ಹೋಲಿಸಿದಲ್ಲಿ ರಾಜ್ಯದಲ್ಲಿ ಡೀಸೆಲ್ ಬೆಲೆ ಹೆಚ್ಚಾಗಿದ್ದು, ಇದರಿಂದ ಲಾರಿ ಮಾಲೀಕರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಸರಕಾರ ಮಾರಾಟ ತೆರಿಗೆಯನ್ನು ಇಳಿಸುವ ಮೂಲಕ ಲಾರಿ ಮಾಲೀಕರ ನೆರವಿಗೆ ಬರಬೇಕು ಎಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಅಲ್ಲದೆ, ಸರಕಾರ ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸದಿದ್ದಲ್ಲಿ, ನೆರೆ ರಾಜ್ಯಗಳಿಂದ ಬರುವ ಯಾವ ಸರಕು ಸಾಗಣಿಕೆ ಲಾರಿಗಳನ್ನು ರಾಜ್ಯಕ್ಕೆ ಬಿಡುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ದಾವಣಗೆರೆ ಯಶಸ್ವೀ ಬಂದ್
ಜೆಡಿಎಸ್ ಸೋಲಿನ ಪರಾಮರ್ಶೆ
ದರೋಡೆಗಿಳಿದ ಸಾಫ್ಟ್‌ವೇರ್ ಉದ್ಯೋಗಿಗಳು
ಅಗಲೀಕರಣ:ಪ್ರತಿಷ್ಠಿತರ ಕಟ್ಟಡಗಳಿಗೆ ಧಕ್ಕೆ
ಮೌಲ್ಯಮಾಪನ: ಉತ್ತರ ಪತ್ರಿಕೆ ಎಸೆದ ಅಧಿಕಾರಿಗಳು
ಹಣ ಬಲ ಪ್ರಾಬಲ್ಯದ ಬಿಜೆಪಿ ಸರ್ಕಾರ-ಖರ್ಗೆ