ಎಫ್‌ಡಿಎ ಪರೀಕ್ಷೆಯ ಪ್ರಥಮ ಪತ್ರಿಕೆ ಬಹಿರಂಗವಾಗಿದೆ ಎಂದು ಇಲ್ಲಿನ ಪರೀಕ್ಷಾ ಕೇಂದ್ರವೊಂದರಲ್ಲಿ ಗೊಂದಲ ಸೃಷ್ಟಿಯಾದ ಕಾರಣ ಪರೀಕ್ಷೆ 40 ನಿಮಿಷ ತಡವಾಗಿ ಆರಂಭವಾಯಿತು. ಇಲ್ಲಿನ ಮೇಲ್ವಿಚಾರಕರೊಬ್ಬರು ಕೊಠಡಿಗೆ ಆಗಮಿಸುವಾಗಲೇ ಪ್ರಶ್ನೆ ಪತ್ರಿಕೆಯ ಬಂಡಲ್‌ನ್ನು ತೆರೆದಿದ್ದು, ಇದರಿಂದ ಸಂಶಯಗೊಂಡ ಅಭ್ಯರ್ಥಿಯೊಬ್ಬ ಈ ರೀತಿ ಆರೋಪಿಸಿದ್ದಾನೆ.
ನಂತರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಧಾವಿಸಿ ಗೊಂದಲ ತಿಳಿಗೊಳಿಸಿದರು. ಎರಡು ಕೊಠಡಿಯಲ್ಲಿ ಒಟ್ಟು 30 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಒಂದು ಕೊಠಡಿಯಲ್ಲಿ 4 ಹಾಗೂ ಮತ್ತೊಂದರಲ್ಲಿ 26 ಮಂದಿ ಇದ್ದರು. ನಾಲ್ಕು ಜನರಿದ್ದ ಕೊಠಡಿಗೆ ಪ್ರಶ್ನೆ ಪತ್ರಿಕೆ ವಿತರಿಸಿ ಮತ್ತೊಂದು ಕೊಠಡಿಗೆ ಬರುವಾಗ ಈ ರೀತಿಯ ಗೊಂದಲ ಸೃಷ್ಟಿಯಾಗಿದೆಯೇ ಹೊರತು ಪ್ರಶ್ನೆ ಪತ್ರಿಕೆ ಬಹಿರಂಗವಾಗಿಲ್ಲ ಎಂದು ಶಿಕ್ಷಣಾಧಿಕಾರಿ ತಿಳಿಸಿದರು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಕರ್ನಾಟಕ ಲೋಕಸೇವಾ ಆಯೋಗ ಇಂದು (ಭಾನುವಾರ) ನಡೆಸುತ್ತಿರುವ ಎಫ್‌ಡಿಎ ಪರೀಕ್ಷೆಗೆ ಒಟ್ಟು 2,22,716 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟು 28 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.
|