ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿತ್ರೋದ್ಯಮದ ಸಮಸ್ಯೆ ಬಗ್ಗೆ ಶೀಘ್ರವೇ ಸಭೆ  Search similar articles
ಕನ್ನಡ ಚಿತ್ರೋದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರವೇ ಸಭೆ ಕರೆದು ಚರ್ಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಶನಿವಾರ ಸಂಜೆ ಯಡಿಯೂರಪ್ಪನವರನ್ನು ಕನ್ನಡ ಚಿತ್ರೋದ್ಯಮದ ಮಂದಿ ಭೇಟಿಯಾಗಿ ಅಭಿನಂದಿಸಿದ್ದರು.

ಕನ್ನಡ ಚಿತ್ರೋದ್ಯಮ ಪೈರಸಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದು, ಕೂಡಲೇ ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಸಾ.ರಾ. ಗೋವಿಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಣಿಜ್ಯೋದ್ಯಮ ಮಂಡಳಿಯ ನೂತನ ಕಟ್ಟಡ ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಾಣಿಜ್ಯೋದ್ಯಮ ಮಂಡಳಿಯ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ, ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹಾಜರಿದ್ದರು.
ಮತ್ತಷ್ಟು
ಎಫ್‌ಡಿಎ ಪ್ರಶ್ನೆ ಪತ್ರಿಕೆ ಬಹಿರಂಗ ಆರೋಪ
10 ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಷೇಧ
ಕೊನೆಗೂ ಹಂಚಿಕೆಯಾದ ಸಚಿವರ ಖಾತೆ
ರಸಗೊಬ್ಬರ ಸಮಸ್ಯೆ ಶೀಘ್ರ ಪರಿಹಾರ: ಸಿಎಂ
ಮಂತ್ರಿಯಾಗಿ ಕಟ್ಟಾ ಪ್ರಮಾಣವಚನ ಸ್ವೀಕಾರ
ಲಾರಿ ಮಾಲೀಕರಿಂದ ಮುಷ್ಕರ ಬೆದರಿಕೆ