ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮರುಮೌಲ್ಯಮಾಪನದ ನಂತರ ಮಿಂಚಿದ ಬಾಲೆ  Search similar articles
ಮೌಲ್ಯಮಾಪನದ ಸಮಯದಲ್ಲಾದ ಲೋಪದಿಂದ ಕಡಿಮೆ ಅಂಕಗಳಿಸಿದ ಪೂರ್ಣ ಪ್ರಜ್ಞಾ ಶಿಕ್ಷಣ ಸಂಸ್ಥೆಯ ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿ ಕಾವ್ಯಾ ಶರತ್ ಮರುಮೌಲ್ಯಮಾಪನ ನಂತರ ಉನ್ನತ ಶ್ರೇಣಿಗೇರಿದ್ದಾರೆ. ಇವರು 625ರಲ್ಲಿ 606 ಅಂಕಗಳಿಸಿದ್ದರು. ಆದರೆ ಮರುಮೌಲ್ಯಮಾಪನದ ನಂತರ 618 ಅಂಕಗಳಿಸಿದ್ದಾರೆ.

ಈಕೆ ಗಣಿತಶಾಸ್ತ್ತ್ರ ಹಾಗೂ ವಿಜ್ಞಾನದಲ್ಲಿ 100, ಸಂಸ್ಕ್ಕತದಲ್ಲಿ 124 ಹಾಗೂ ಕನ್ನಡದಲ್ಲಿ 98 ಅಂಕ ಗಳಿಸಿದ್ದರು. ಆದರೆ ಇಂಗ್ಲೀಷ್ ಹಾಗೂ ಸಮಾಜ ವಿಜ್ಞಾನದಲ್ಲಿ ತಲಾ 92 ಅಂಕ ಗಳಿಸಿದ್ದರಿಂದ ಸಹಜವಾಗಿಯೇ ಈಕೆಗೆ ಸಂದೇಹ ಬಂದು ಉತ್ತರ ಪತ್ರಿಕೆಯ ಪ್ರತಿ ನಕಲಿ ಪಡೆದು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದರು. ಮರುಮೌಲ್ಯಮಾಪನದಲ್ಲಿ ತಲಾ ಇವರಿಗೆ 6 ಅಂಕಗಳು ಬಂದು ಒಟ್ಟು 618 ಅಂಕಗಳೊಂದಿಗೆ ಮಿಂಚಿದ್ದಾರೆ.

ಮರುಮೌಲ್ಯಮಾಪನದ ನಂತರ 618 ಅಂಕ ಪಡೆದ ಕಾವ್ಯಾ ಶರತ್ ಉನ್ನತ ಶ್ರೇಣಿಯಲ್ಲಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಡಿ.ಎಸ್. ರಾಜಣ್ಣ ತಿಳಿಸಿದ್ದಾರೆ.
ಮತ್ತಷ್ಟು
ಚಿತ್ರೋದ್ಯಮದ ಸಮಸ್ಯೆ ಬಗ್ಗೆ ಶೀಘ್ರವೇ ಸಭೆ
ಎಫ್‌ಡಿಎ ಪ್ರಶ್ನೆ ಪತ್ರಿಕೆ ಬಹಿರಂಗ ಆರೋಪ
10 ವಿದ್ಯಾರ್ಥಿಗಳಿಗೆ ಪರೀಕ್ಷೆ ನಿಷೇಧ
ಕೊನೆಗೂ ಹಂಚಿಕೆಯಾದ ಸಚಿವರ ಖಾತೆ
ರಸಗೊಬ್ಬರ ಸಮಸ್ಯೆ ಶೀಘ್ರ ಪರಿಹಾರ: ಸಿಎಂ
ಮಂತ್ರಿಯಾಗಿ ಕಟ್ಟಾ ಪ್ರಮಾಣವಚನ ಸ್ವೀಕಾರ