ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಕ್ಷೇತರ ಸಚಿವರಲ್ಲಿ ಅಪಸ್ವರದ ಛಾಯೆ  Search similar articles
ನೂತನ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲದಂತೆ ಕಾಣುತ್ತಿದೆ. ಸರ್ಕಾರ ರಚನೆಯಾಗಿ ಒಂದು ವಾರ ಕಳೆದ ನಂತರ ಲೆಕ್ಕಾಚಾರ ಹಾಕಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾತೆ ಹಂಚಿದರೂ ಸಚಿವರು ಮಾತ್ರ ಅಸಮಾಧಾನಗೊಂಡಿದ್ದಾರೆ. ತಮಗೆ ಇಷ್ಟವಿಲ್ಲದ ಖಾತೆಯನ್ನು ಬಿಎಸ್‌ವೈ ನೀಡಿದ್ದಾರೆ ಎಂದು ಅಪಸ್ವರ ಎತ್ತಿದ್ದಾರೆ.

ಪಕ್ಷದ ಶಾಸಕರನ್ನಾದರೂ ಸಂಭಾಳಿಸಿಕೊಂಡು ಹೋಗಬಹುದು. ಆದರೆ ಪಕ್ಷೇತರರು ಕೂಡಾ ಖಾತೆ ಹಂಚಿಕೆಯಲ್ಲಿ ಅಸಮಾಧಾನ ತೋರಿದ್ದಾರೆ. ಸರ್ಕಾರ ರಚನೆಗೆ ತಮ್ಮನ್ನು ಬಳಸಿಕೊಂಡ ಮುಖ್ಯಮಂತ್ರಿ ಈಗ ಮೂಲೆಗುಂಪಾಗಿರುವ ಖಾತೆಗಳನ್ನು ನೀಡಿದ್ದಾರೆ ಎಂದು ಪಕ್ಷೇತರರು ದೂರಿದ್ದಾರೆ. ಮುಂದಿನ ದಿನಗಳಲ್ಲಿ ತಾವು ಒಟ್ಟಾಗಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಪಕ್ಷೇತರರಾದ ಗೂಳಿಹಟ್ಟಿ ಶೇಖರ್, ನರೇಂದ್ರ ಸ್ವಾಮಿ, ಶಿವರಾಜ ತಂಗಡಗಿ, ಡಿ. ಸುಧಾಕರ್ ಹಾಗೂ ವೆಂಕಟರವಣಪ್ಪ ತಮ್ಮದೇ ಆದ ನಿರ್ಧಾರ ಕೈಗೊಳ್ಳಲಿದ್ದು, ಮುಖ್ಯಮಂತ್ರಿ ತಮಗೆ ರೋಗಗ್ರಸ್ತ ಖಾತೆಗಳಾದ ಜವಳಿ, ಯುವಜನ, ಕ್ರೀಡಾ ಖಾತೆಗಳನ್ನು ನೀಡಿ ನಮ್ಮನ್ನು ಮಣಿಸುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದ್ದಾರೆ.

ಖಾತೆಗಳ ಬಗ್ಗೆ ಅತೃಪ್ತಿ ತಳೆದ ಪಕ್ಷೇತರರು ಖಾತೆಗಳನ್ನು ಹಿಂತಿರುಗಿಸಿ, ತಮ್ಮ ಮುಂದಿನ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ಗುಡುಗಿದ್ದಾರೆ.
ಮತ್ತಷ್ಟು
ಅಧಿವೇಶನದ ನಂತರ ಸಂಪುಟ ವಿಸ್ತರಣೆ: ಡಿ.ವಿ
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಪಟ್ಟಿ ಪ್ರಕಟ
ನಕ್ಸಲರೊಂದಿಗೆ ಮಾತುಕತೆ ಸಾಧ್ಯವಿಲ್ಲ:ಆಚಾರ್ಯ ಸ್ಪಷ್ಟನೆ
ಮರುಮೌಲ್ಯಮಾಪನದ ನಂತರ ಮಿಂಚಿದ ಬಾಲೆ
ಚಿತ್ರೋದ್ಯಮದ ಸಮಸ್ಯೆ ಬಗ್ಗೆ ಶೀಘ್ರವೇ ಸಭೆ
ಎಫ್‌ಡಿಎ ಪ್ರಶ್ನೆ ಪತ್ರಿಕೆ ಬಹಿರಂಗ ಆರೋಪ