ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸಗೊಬ್ಬರ ಸಮಸ್ಯೆಗೆ ಪರಿಹಾರ: ಬಿಎಸ್‌ವೈ  Search similar articles
ರಾಜ್ಯದಲ್ಲಿ ಉಂಟಾಗಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆಯ ಸಮಸ್ಯೆ ಮೂರು ನಾಲ್ಕು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರಸಗೊಬ್ಬರ ಸಮಸ್ಯೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆಯಿಲ್ಲ. ಸಾಕಷ್ಟು ಬೀಜ ದಾಸ್ತಾನು ಇವೆ. ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.

ರಸಗೊಬ್ಬರ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ. ರಸಗೊಬ್ಬರ ಪೂರೈಕೆಗೆ ಒತ್ತಾಯಿಸಿ ಬಂದ್, ಪ್ರತಿಭಟನೆ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದರು. ರೈತರು ಆತಂಕಪಡುವ ಅಗತ್ಯವಿಲ್ಲ. ಎಲ್ಲವೂ ಸರಿ ಹೋಗಲಿದೆ ಎಂದು ಭರವಸೆ ನೀಡಿದರು.

ಕೃಷಿ ಸಚಿವರ ಹೇಳಿಕೆ: ರಾಜ್ಯದಲ್ಲಿ ಉಂಟಾಗಿರುವ ರಸಗೊಬ್ಬರ ಸಮಸ್ಯೆಗೆ ರಾಜ್ಯಪಾಲರ ಆಳ್ವಿಕೆ ಸಮಯದಲ್ಲಿನ ದುರಾಡಳಿತವೇ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲಾವಾರು ಅಗತ್ಯ ಆಧರಿಸಿ ರೈತರಿಗೆ ರಸಗೊಬ್ಬರ ಪೂರೈಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದರು. ಆದರೆ ರಾಜ್ಯಪಾಲರ ಆಡಳಿತದಲ್ಲಿ ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಪಾದಿಸಿದ್ದಾರೆ.
ಮತ್ತಷ್ಟು
ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಶಂಕರಮೂರ್ತಿ ನೇಮಕ
ಕೆಪಿಎಸ್‌ಸಿ ಅಕ್ರಮ: ಶಿಸ್ತು ಕ್ರಮಕ್ಕೆ ಆಯೋಗ ಚಿಂತನೆ
ಶೆಡ್‌ನಲ್ಲಿ ಅಕ್ರಮ ಸ್ಪೋಟಕ ವಶ
ರಸಗೊಬ್ಬರದ ಗದ್ದಲ: ತೀವ್ರಗೊಂಡ ಪ್ರತಿಭಟನೆ
ತೈಲ ಬೆಲೆ ಏರಿಕೆ: ರೈಲು, ರಸ್ತೆ ತಡೆಗೆ ನಿರ್ಧಾರ
ಖಾತೆ ಹಂಚಿಕೆ: ಭುಗಿಲೆದ್ದ ಅಸಮಾಧಾನ