ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ ಪ್ರಾಥಮಿಕ ಶಿಕ್ಷಕರ ನೇಮಕ: ಕಾಗೇರಿ  Search similar articles
ಸರ್ಕಾರ ಈ ತಿಂಗಳ ಕೊನೆ ವೇಳೆಗೆ ಆರು ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ರಾಜ್ಯಪಾಲರ ಆಡಳಿತಾವಧಿಯಲ್ಲೇ ಮುಗಿಯಬೇಕಿತ್ತು. ಆದರೆ ಅದು ಪೂರ್ಣಗೊಂಡಿಲ್ಲ. ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶದ ಪ್ರತಿಗಳನ್ನು ಕಳುಹಿಸಲಾಗುವುದು ಎಂದರು.

ಮುಂದೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವರ್ಗಾವಣೆಯನ್ನು ಒಂದು ಸಮಸ್ಯೆಯಾಗಿ ಪರಿಣಮಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಪಠ್ಯ ಪುಸ್ತಕಗಳಿಗೆ ವಿದ್ಯಾರ್ಥಿಗಳು ಇನ್ನೂ ಒಂದು ವಾರ ಕಾಯಬೇಕು. ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀಡಲು 3 ಕೋಟಿ 71 ಲಕ್ಷ ಪುಸ್ತಕಗಳು ಅಗತ್ಯವಿದೆ ಎಂದು ತಿಳಿಸಿದರು.

ಅನುದಾನಿತ ಶಾಲೆಗಳಿಗೆ 1.35 ಕೋಟಿ ಪುಸ್ತಕಗಳ ಬೇಡಿಕೆ ಬಂದಿದ್ದು, ಒಂದು ಕೋಟಿ ಪುಸ್ತಕಗಳನ್ನು ಈಗಾಗಲೇ ಪೂರೈಸಲಾಗಿದೆ ಎಂದರು.
ಮತ್ತಷ್ಟು
ಅದಿಕಾರಕ್ಕೆ ಬಂದದ್ದೆ ಅಧಿಕಾರಿಗಳ ವರ್ಗಾವರ್ಗಿ
ರಸಗೊಬ್ಬರ ಸಮಸ್ಯೆಗೆ ಪರಿಹಾರ: ಬಿಎಸ್‌ವೈ
ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಶಂಕರಮೂರ್ತಿ ನೇಮಕ
ಕೆಪಿಎಸ್‌ಸಿ ಅಕ್ರಮ: ಶಿಸ್ತು ಕ್ರಮಕ್ಕೆ ಆಯೋಗ ಚಿಂತನೆ
ಶೆಡ್‌ನಲ್ಲಿ ಅಕ್ರಮ ಸ್ಪೋಟಕ ವಶ
ರಸಗೊಬ್ಬರದ ಗದ್ದಲ: ತೀವ್ರಗೊಂಡ ಪ್ರತಿಭಟನೆ