ಭರವಸೆಗೆ ಕಾದ ಗ್ರಾಮಸ್ಥರು: ನಿರ್ಮಿಸಿದರು ರಸ್ತೆ ರಾಜಕಾರಣಿಗಳ ಈಡೇರದ ಭರವಸೆಗೆ ಬೇಸತ್ತ ಹಾನಗಲ್ ತಾಲೂಕಿನ ಗೆಜ್ಜೆಹಳ್ಳಿಯ ಹಳ್ಳಿಗರು ಸ್ವತ: ತಮ್ಮ ಹಣದಿಂದಲೇ 3 ಕಿ.ಮೀ ರಸ್ತೆ ನಿರ್ಮಿಸಿದ್ದಾರೆ. ಈ ಹಿಂದೆ ಅನೇಕ ಬಾರಿ ರಾಜಕಾರಣಿಗಳಿಗೆ ಬೇಡಿಕೆ ಸಲ್ಲಿಸಿದರೂ ಅದು ಈಡೇರಲಿಲ್ಲ.
ಗೆಜ್ಜೆಹಳ್ಳಿಯ ಅಕ್ಕಪಕ್ಕದ ಹಳ್ಳಿಗಳಾದ ಹಿರೂರು ಹಾಗೂ ಗೌರಾಪುರಕ್ಕೆ ರಸ್ತೆ ಆಗಬೇಕಿತ್ತು. ಆದರೆ ರಾಜಕಾರಣಿಗಳಿಂದ ಬರೀ ಭರವಸೆ ಮಾತ್ರ ದೊರಕಿತು. ಇದರಿಂದ ಬೇಸತ್ತ ಜನ ದಾನಿಗಳಿಂದ ಸಂಗ್ರಹಿಸಿದ 4 ಲಕ್ಷ ರೂ.ವನ್ನು ರಸ್ತೆ ನಿರ್ಮಿಸಲು ವ್ಯಯಿಸಿದ್ದಾರೆ.
ಹಳ್ಳಿಯ 300 ಮಂದಿ ಒಟ್ಟಾಗಿ ನೆಲ ಅಗೆಯಲು ಜೆಸಿಬಿಯನ್ನು ಬಾಡಿಗೆಗೆ ತಂದರು. ಜೊತೆಯಾಗಿ ಶ್ರಮದಾನ ಮಾಡಿ ಭೂಮಿ ಸಮತಟ್ಟುಗೊಳಿಸಿದರು. ಇನ್ನು ಕೆಲವು ರೈತರು ತಮ್ಮ ಟ್ರ್ಯಾಕ್ಟರ್ ತಂದರು. ಈಗ ಜಲ್ಲಿಕಲ್ಲು ಹಾಕುವುದು ಮತ್ತು ಡಾಂಬರೀಕರಣ ಮಾತ್ರ ಬಾಕಿ ಇದೆ.
ಇಷ್ಟೆಲ್ಲ ಮಾಡಿಯಾದ ಮೇಲಾದರೂ ನೂತನ ಸರ್ಕಾರ ಈ ರಸ್ತೆಯ ಜವಾಬ್ದಾರಿ ಹೊತ್ತು ಕಾಮಗಾರಿ ನಡೆಸುವುದೇ? ಎಂದು ಹಳ್ಳಿಗರು ಎದುರು ನೋಡುತ್ತಿದ್ದಾರೆ.
|