ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಕ್ಕೆ 4 ಪ್ರಶಸ್ತಿ ಕನ್ನಡದ ಹೆಮ್ಮೆ:ನಾಗಾಭರಣ  Search similar articles
MOKSHA
ರಾಜ್ಯಕ್ಕೆ ನಾಲ್ಕು ಸ್ವರ್ಣ ಪ್ರಶಸ್ತಿ ಲಭಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಭಾವಂತ ನಿರ್ದೇಶಕ ನಾಗಾಭರಣ ಅವರು ಇದು ಕನ್ನಡದ ಹೆಮ್ಮೆ ಎಂದಿದ್ದಾರೆ.

ಕಲ್ಲರಳಿ ಹೂವಾಗಿ ಚಿತ್ರ ನಡೆದ ಕಾಲಮಾನವನ್ನು ಗಣನೆಗೆ ತೆಗೆದುಕೊಂಡಾಗ, ಆಗ ಜಾತಿ-ಮತ-ಪಂಗಡಗಳ ನಡುವಿನ ಕಂದಕದ ಇದ್ದಿರುವುದು ಕಂಡು ಬರುತ್ತಿದೆ. ಆ ಸಂದರ್ಭದಲ್ಲಿ ನಡೆದ ಪ್ರೇಮ ಇದೆಲ್ಲವನ್ನು ಮರೆಸುತ್ತಿದೆ. ಇಂತಹ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ ಎಂದು ಸಂತಸ ಹಂಚಿಕೊಂಡರು.

ಮಕ್ಕಳ ಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಸಂತೋಷವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡ ಕಿರಿಯ ನಿರ್ದೇಶಕ ಮಾಸ್ಟರ್ ಕಿಶನ್, ಚಿತ್ರದಲ್ಲಿ ಅಭಿನಯಿಸಿದ ಚಿತ್ರತಂಡ ಹಾಗೂ ಚಿತ್ರವನ್ನು ಪ್ರೋತ್ಸಾಹಿದ ಎಲ್ಲರಿಗೂ ಇದರ ಯಶಸ್ಸು ಸಲ್ಲುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ 2006ರ ಸಾಲಿನ 54ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು ರಾಜ್ಯಕ್ಕೆ ನಾಲ್ಕು ಸ್ವರ್ಣಕಮಲ ಪ್ರಶಸ್ತಿಗಳು ಲಭ್ಯವಾಗಿವೆ. ಕನ್ನಡದ 'ಕಾಡ ಬೆಳಂದಿಗಳು' ಹಾಗೂ ತುಳು ಭಾಷೆಯ 'ಕೋಟಿ ಚೆನ್ನಯ್ಯ' ಚಲನಚಿತ್ರ ಶ್ರೇಷ್ಠ ಪ್ರಾದೇಶಿಕ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಬಾಚಿಕೊಂಡಿದೆ. ಅಲ್ಲದೆ, 'ಕೇರಾಫ್ ಫುಟ್ ಪಾತ್' ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರವಾಗಿ ಹೊರಹೊಮ್ಮಿದರೆ, ನಾಗಾಭರಣ ನಿರ್ದೇಶನದ 'ಕಲ್ಲರಳಿ ಹೂವಾಗಿ' ಚಿತ್ರವನ್ನು ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು ಗುರುತಿಸಲಾಗಿದೆ. ಈ ಮೂಲಕ ರಾಜ್ಯ ಚಲನಚಿತ್ರಗಳಿಗೆ ನಾಲ್ಕು ರಾಷ್ಟ್ರಪ್ರಶಸ್ತಿ ದೊರಕಿದಂತಾಗಿದೆ.
ಮತ್ತಷ್ಟು
ರಸಗೊಬ್ಬರ ಪ್ರತಿಭಟನೆ: ಗೋಲಿಬಾರ್‌ಗೆ 1 ಬಲಿ
ರಸಗೊಬ್ಬರ ಪ್ರತಿಭಟನೆ: 4ಬಸ್‌ಗಳಿಗೆ ಬೆಂಕಿ
ಭರವಸೆಗೆ ಕಾದ ಗ್ರಾಮಸ್ಥರು: ನಿರ್ಮಿಸಿದರು ರಸ್ತೆ
ಶೀಘ್ರವೇ ಪ್ರಾಥಮಿಕ ಶಿಕ್ಷಕರ ನೇಮಕ: ಕಾಗೇರಿ
ಅಧಿಕಾರಕ್ಕೆ ಬಂದದ್ದೆ ಅಧಿಕಾರಿಗಳ ವರ್ಗಾವರ್ಗಿ
ರಸಗೊಬ್ಬರ ಸಮಸ್ಯೆಗೆ ಪರಿಹಾರ: ಬಿಎಸ್‌ವೈ